ಬಂಟ್ವಾಳ: ಸಜೀಪಮೂಡ ಗ್ರಾಮ ಈಶ್ವರಮಂಗಲದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಪೂಜಾ ಉತ್ಸವ ಜರಗಲಿದೆ. ವರ್ಷಂಪ್ರತಿಯಂತೆ ಮಹಾಶಿವರಾತ್ರಿ ಪೂಜೆಯ ಅಂಗವಾಗಿ ಫೆ.21 ಶುಕ್ರವಾರದಂದು ಬೆಳಿಗ್ಗೆ ಶ್ರೀದೇವರಿಗೆ ಫಲಪಂಚಾಮೃತ, ಅಭಿಷೇಕ ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ಮಹಾಮಂಗಳಾರತಿ, ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ಜರಗಲಿದೆ. ಬೆಳಿಗ್ಗೆ 9 ಗಂಟೆಯಿಂದ ಬಂಟ್ವಾಳ ಅಂಗಸಂಸ್ಥೆ ಮಹಿಳಾ ವೇದಿಕೆಯ ಕೂಟ ಮಹಾಜಗತ್ತು ಇವರಿಂದ ಹಾಗೂ ಶ್ರೀ ಶರಭೇಶ್ವರ ಮತ್ತು ಶಿವರಂಜನಿ ಕಲಾಕೇಂದ್ರ ಬೊಕ್ಕಸ ಸಜಿಪಮುನ್ನೂರು ನಾಮ ಸಂಕೀರ್ತನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30ರಿಂದ ಮುಡಿಪು ದಕ್ಷಾಧ್ವರ ವಿಶ್ವಭಾರತಿ ಯಕ್ಷ ಸಂಜೀವಿನಿ ರಿಜಿಸ್ಟರ್ಡ್ ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಸಂಜೆ ೭ಗಂಟೆಯಿಂದ ಕುಕ್ಕುದಕಟ್ಟೆ ಶ್ರೀರಾಮ ಹಿಂದೂ ಸಂಸ್ಕೃತಿ ಮಂದಿರ, ಈಶ್ವರಮಂಗಳ ಶ್ರೀ ಸದಾಶಿವ ಬಾಲಗಣಪತಿ ಭಜನಾ ಮಂಡಳಿ, ಬೆಂಕ್ಯ ಅನ್ನಪ್ಪ ಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಸಜಿಪಮೂಡ ಶ್ರೀ ಶಾರದಾ ಅಂಬಿಕಾ ಭಜನಾ ಮಂದಿರ ಶಾರದಾ ನಗರ ಇವರುಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ನಂತರ ರಂಗ ಪೂಜೆ ಮಹಾಪೂಜೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here