ವಿಟ್ಲ: ಮಾಣಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ‘ಸಂವಿಧಾನ ರಕ್ಷಿಸಿ,ದೇಶ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಂವಿಧಾನ ವಿರೋಧಿ ಕರಾಳ ಕಾನೂನನ್ನು ಹಾಗೂ ದೇಶದ ಉದ್ದಗಲಕ್ಕೂ ಫ್ಯಾಸಿಸ್ಟ್ ಶಕ್ತಿಗಳಿಂದ ನಡೆಯುತ್ತಿರುವ ಕಗ್ಗೊಲೆಗಳನ್ನು ಖಂಡಿಸಿ ಪೆ.28 ರಂದು(ನಾಳೆ) ಮಧ್ಯಾಹ್ನ 2:30 ಕ್ಕೆ ಮಾಣಿಯ ಗಾಂಧಿ ಮೈದಾನದಲ್ಲಿ ಬೃಹತ್ ಜನ ಜಾಗೃತಿ ಸಮಾವೇಶ ನಡಯಲಿದೆ.
ಸುದ್ದಿ ಟಿವಿ ಸಂಪಾದಕ ಶಶಿಧರ್ ಭಟ್, ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ದ್ವಾರಕನಾಥ್, ಪ್ರಗತಿಪರ ಹೋರಾಟಗಾರ
ಬಿ. ಆರ್. ಬಾಸ್ಕರ್ ಪ್ರಸಾದ್ ಬೆಂಗಳೂರು, ಮೈಸೂರು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮಿಜಿ, ಮಾಜಿ ಸಚಿವ ಬಿ. ರಮಾನಾಥ ರೈ, ನಿವೃತ್ತ ಪೋಲಿಸ್ ಅಧಿಕಾರಿ ಜಿ.ಎ. ಬಾವ, ಜೆ.ಡಿ.ಎಸ್. ಮುಖಂಡ ಯಮ್.ಬಿ. ಸದಾಶಿವ ಸುಳ್ಯ, ಅಬ್ದುಲ್
ಅಝೀಝ್ ದಾರಿಮಿ ಚೊಕ್ಕಬೆಟ್ಟು, ಯಾಕುಬ್ ಸಹದಿ ಬೆಳ್ತಂಗಡಿ, ಪ್ರಗತಿಪರ ಹೋರಾಟಗಾರ್ತಿ ನೇಮಿ ಚಂದ್ರ ಬೆಳಗಾಂ,
ಪಿ.ಎಫ್.ಐ ಮುಖಂಡ ಅಡ್ವೊಕೇಟ್ ಅಮೀನ್ ಮೊಹ್ಸೀನ್, ಸಾಮಾಜಿಕ ಹೋರಾಟಗಾರ ಹನೀಫ್ ಖಾನ್ ಕೊಡಾಜೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಕಟಣೆ ತಿಳಿಸಿದೆ.