ಮಾಣಿ :ಶೇರಾ ಇಲ್ಲಿನ ಉದಯ ಯುವಕ ಮಂಡಲ ರಿಜಿಸ್ಟರ್ ಇದರ 25ನೇ ಬೆಲ್ಲಿ ಹಬ್ಬದ ಸಂಭ್ರಮಾಚರಣೆ ಉದಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಮಾತನಾಡಿ, ಸಂಘಸಂಸ್ಥೆಗಳ ಮೂಲಕ ಯುವಕರ ಸಂಘಟನೆಯಾಗಬೇಕು, ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಜೊತೆಗೆ ರಾಷ್ಟ್ರ ನಿರ್ಮಾಣದ ಕಾರ್ಯ ನಡೆಯಬೇಕಾಗಿದೆ ಎಂದರು.
ಸರಕಾರದ ಜೊತೆಯಲ್ಲಿ ಸಂಘ ಸಂಸ್ಥೆಗಳು ಕೈಜೋಡಿಸಿ, ಗ್ರಾಮದ ಅಭಿವೃದ್ಧಿ ಗಾಗಿ ಸಹಕಾರ ನೀಡಿ ಎಂದರು.
ಸಾಧನೆಗೈದವರನ್ನು ಗುರುತಿಸುವ ಮನಸ್ಸು ಇತರರಿಗೆ ಮಾದರಿಯಾಗಲಿ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರಮಾನಾಥ ರೈ, ಚಲನಚಿತ್ರದ ನಾಯಕ ನಟ ರೂಪೇಶ್ ಶೆಟ್ಟಿ ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಮಂಗಳೂರು ಇವರು ಭಾಗವಹಿಸಿ ಶುಭ ಹಾರೈಸಿದರು.
ನಿವೃತ್ತ ಶಿಕ್ಷಕರು, ಅಧ್ಯಕ್ಷರು ಲಯನ್ಸ್ ಕ್ಲಬ್ ಮಾಣಿ ಲಯನ್ ಕೆ. ಗಂಗಾಧರ ರೈ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇದರ ಸಂಚಾಲಕರ ಪ್ರಹ್ಲಾದ ಶೆಟ್ಟಿ ಜಡ್ತಿಲ, ರಾಷ್ಟೀಯ ಪ್ರಶಸ್ತಿ ಪುರಸ್ಕೃತ ಕೋಟಿಯಪ್ಪ ಪೂಜಾರಿ ಶೇರಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ದೈವ ನರ್ತಕ ಲೋಕಯ್ಯ ಶೇರಾ , ಕಿರಿಯರ ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ ದೀಕ್ಷಿತ್ ಸುರ್ಲಾಜೆ ಇವರನ್ನು ಗೌರವಿಸಲಾಯಿತು.

ಉದಯ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ 25 ಅಧ್ಯಕ್ಷರಿಗಳನ್ನು ವೇದಿಕೆಯಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ತುಳು ಲಹರಿ ತಂಡದಿಂದ ಪುದರ್ ಬೊರ್ಚಿ ಊರು ಬೊರ್ಚಿ ನಾಟಕ ನಡೆಯಿತು.

ಉದಯ ಯುವಕ ಮಂಡಲ (ರಿ)ಶೇರಾ ಇದರ ಬೆಳ್ಳಿಹಬ್ಬದ ಪ್ರಯುಕ್ತ 58 ಕೆಜಿ ವಿಭಾಗದ ಪುರುಷರ ಕಬ್ಬಡ್ಡಿ ಪಂದ್ಯಾಟ ನಡೆಸಲಾಗಿತ್ತು. ಈ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ :ಓಂ ಶಕ್ತಿ ಕುಕ್ಕುಜೆ, ದ್ವಿತೀಯ :ಲಕ್ಷ್ಮಿನರಸಿಂಹ ಕಡೇಶಿವಾಲಯ, ತೃತೀಯ :ಶ್ರೀರಾಮ ಶಂಭೂರು, ಚತುರ್ಥ :ಏನ್. ಎಚ್ ಬಂಗಾರ್ ಕಟ್ಟೆ ಅವರು ಪಡೆದುಕೊಂಡಿದ್ದು, ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಯಿತು.
ಉದಯ ಯುವಕ ಮಂಡಲ ಶೇರಾ ಇದರ ನಿಕಟ ಪೂರ್ವ ಅಧ್ಯಕ್ಷ ಆನಂದ ಪಾಪೆತ್ತಿಮಾರ್ ಸ್ವಾಗತಿಸಿ,
ರಾಜೇಶ್ ಸುರ್ಲಾಜೆ ಧನ್ಯವಾದ ನೀಡಿದರು..
ನವೀನ್ ಹೆಗ್ಡೆ ಮತ್ತು ವಿಶು ಪೂಜಾರಿ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here