


ಮಾಣಿ: ಫೆ.6 ರಂದು ನಡೆಯಲಿರುವ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯ ಪ್ರಯುಕ್ತ ಪೂರ್ವಭಾವಿ ಯಾಗಿ ಮಾಣಿ ಉಳ್ಳಾಲ್ತಿ ದೈವಸ್ಥಾನದ ಅಂಗಣಕ್ಕೆ ಚಪ್ಪರ ಮುಹೂರ್ತ ಇಂದು ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಯ ವೇಳೆ ನಡೆಯಿತು.
ಪಳನೀರು ಅನಂತ ಭಟ್ ಅವರ ಪೌರೋಹಿತ್ಯ ದಲ್ಲಿ ವಿಧಿಬದ್ದವಾಗಿ ಚಪ್ಪರ ಮೂಹೂರ್ತ ನಡೆದ ಬಳಿಕ ಮಾಣಿ ಉಳ್ಳಾಲ್ತಿ ಮೆಚ್ಚಿ ಗೆ ಅಣಿ ಕಟ್ಟಲು ಬೇಕಾಗುವ ಅಡಿಕೆ ಹಾಲೆಯನ್ನು ತರಲು ಸಂಪ್ರದಾಯದಂತೆ ಕೆದಿಲ ಮನೆಗೆ ತೆರಳಿ , ಅಲ್ಲಿಂದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಒಂದೇ ಅಡಿಕೆ ಮರದಿಂದ ಒಂದು ಹಾಲೆ ಹಿಂಗಾರ, ಒಂದು ಕಿಲೆ ಅಡಿಕೆ, ಒಂದು ಅಡಿಕೆ ಹಾಲೆಯನ್ನು ತೆಗೆದು ಮೂಹೂರ್ತ ಮಾಡಲಾಗುತ್ತದೆ, ಬಳಿಕ ಬೇಕಾಗುವಷ್ಟು ಹಾಲೆಯನ್ನು ಸಂಗ್ರಹಿಸಲಾಗುತ್ತದೆ.
ಅಲ್ಲಿಂದ ತರಿಸಲಾದ ಹಾಲೆಗೆ ಪೌರೋಹಿತ್ಯ ನಡೆದ ಬಳಿಕ ಬಾಕಿಮಾರು ಗದ್ದೆಯಲ್ಲಿ ಪ್ರಥಮ ಚೆಂಡು ಇಂದು ನಡೆಯಿತು.
ಇಂದಿನಿಂದ ಮೂರು ದಿನಗಳ ಕಾಲ ಬಾಕಿಮಾರು ಗದ್ದೆಯಲ್ಲಿ ಚೆಂಡು ಹಾಕುವ ಕಾರ್ಯ ಕ್ರಮ ಸಂಪ್ರದಾಯದಂತೆ ನಡೆಯುತ್ತದೆ.


