ವೇಣೂರು: ನಿಟ್ಟಡೆ ಕುಂಭಶ್ರೀ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಮತ್ತು ಕೋಚಿಂಗ್ ಅಕಾಡೆಮಿ ಕೇಂದ್ರವು ಮಡಂತ್ಯಾರ್‌ನ ಸೆಕ್ರೆಟ್‌ಹಾರ್ಟ್ ಕಾಂಪ್ಲೆಕ್ಸ್‌ನಲ್ಲಿ ಫೆ.21ರಂದು ಉದ್ಘಾಟನೆಗೊಂಡಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಅವರು ಮಾತನಾಡಿ, ಶಿಕ್ಷಣ ಪದ್ಧತಿಯಲ್ಲಿ ಇಂದು ನೈತಿಕ ಶಿಕ್ಷಣ ಕಡಿಮೆಯಾಗಿದೆ. ವ್ಯಾಪಾರ, ವ್ಯವಹಾರ, ಉದ್ದಿಮೆಗೆ ಪೂರಕವಾದ ಆರ್ಥಿಕ ಶಿಕ್ಷಣಕ್ಕೆ ವಿದ್ಯಾಸಂಸ್ಥೆಗಳು ಇಂದು ಹೆಚ್ಚಿನ ಒತ್ತು ನೀಡುತ್ತಿದೆ. ಆರ್ಥಿಕ ಶಿಕ್ಷಣದ ಜತೆಗೆ ನೈತಿಕ ಮತ್ತು ಮೌಲ್ಯದಾರಿತ ಶಿಕ್ಷಣ ದೊರೆಯುವಂತಾಗಲಿ ಎಂದರು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ಅವರು ಮಾತನಾಡಿ, ಮಕ್ಕಳಿಗೆ ಯಾವತ್ತೂ ಆಸ್ತಿ ಮಾಡಿ ಇಡಬೇಡಿ. ಉನ್ನತ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೆ ಆಸ್ತಿಗಳನ್ನಾಗಿ ಮಾಡಿ ಎಂದರು. ಸಂಸ್ಥೆಯ ಸಂಚಾಲಕರಾದ ಗಿರೀಶ್ ಕೆ.ಹೆಚ್ ಶುಭ ಹಾರೈಸಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಉಪಾನ್ಯಸಕ ,ನೂತನ ಸಂಸ್ಥೆಯ ಮೇಲ್ವಿಚಾರಕಾರದ ಅಶ್ವಿತ್ ಕುಲಾಲ್ ಪಾಸ್ತವಿಕ ಮಾತಾನಾಡಿ, ಮಡಂತ್ಯಾರು ಸೆಕ್ರೆಟ್‌ಹಾರ್ಟ್ ಕಾಂಪ್ಲೆಕ್ಸ್‌ನ ಮಾಲಕ ಸ್ಟಾನಿ ಮಾಡ್ತಾ, ಕುಂಭಶ್ರೀ ವಿದ್ಯಾ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಧರ್ಮ ಗುರುಗಳು ಅಬ್ದುಲ್ ರಝಕ್ ಸಖಾಫಿ ಮಡಂತ್ಯಾರ್, ನಿವೃತ್ತ ವಿಜಯ ಬ್ಯಾಂಕ್ ಪ್ರಬಂಧಕ ಸೋಮಯ್ಯ ಅನೈನಡೆ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ತಾ.ಪಂ. ಸದಸ್ಯೆ ವಸಂತಿ, ಕಾಲೇಜಿನ ಪ್ರಾಚಾರ್ಯ ರಕ್ಷಿತ್ ಕುಲಾಲ್ ಬಿ.ಇ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಗಣೇಶ್ ಹೊಸಪಟ್ಣ, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ ಪಾಣೂರು, ಗ್ರಾ .ಂ ಮಾಜಿ ಸದಸ್ಯ ಅಬ್ದುಲ್ ರಹೀಮಾನ್ ಪಡ್ಪು ಮಡಂತ್ಯಾರ್ ,ಕುಂಭಶ್ರೀ ಮಹಿಳಾ ಮಂಡಲದ ಸದಸ್ಯರಾದ ಶೈಲಜಾ ಸತೀಶ್, ಯಶಲತಾ ಅಮ್ಮಾಜಿ ಮತ್ತಿತರು ಉಪಸ್ಥಿತರಿದ್ದರು.
ಪ್ರೌಢ ಶಾಲಾ ವಿಭಾಗದ ಉಪ ಮುಖ್ಯ ಶಿಕ್ಷಕಿ ಅಪರ್ಣ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತಾ ಮತ್ತು ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಿರೂಪಿಸಿ, ಮುಖ್ಯ ಶಿಕ್ಷಕಿ ಉಷಾ ಜಿ. ವಂದಿಸಿದರು. ಸಂಸ್ಥೆಯ ಶಿಕ್ಷಕ ವೃಂದ, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ಸಹಕರಿಸಿದರು.