ಬಂಟ್ವಾಳ: ದ.ಕ.ಜಿ.ಪಂ. ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ಅವರ 12 ಲಕ್ಷ ರೂಪಾಯಿ ಜಿ.ಪಂ. ಅನುದಾನದಲ್ಲಿ ಇರಾ ಗ್ರಾಮದ ಕುಕ್ಕಾಜೆ ಸೈಟ್ ಜನವಸತಿ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗೆ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಶಿಲಾನ್ಯಾಸಗೈದರು. ಗ್ರಾ.ಪಂ. ಸದಸ್ಯ ಚಂದ್ರಶೇಖರ, ಗಣ್ಯರಾದ ಎಸ್.ಪಿ. ಸುಲೈಮಾನ್, ಅಹಮದ್ ಬಾವ, ಇಸಾಕ್ ಕುಕ್ಕಾಜೆ, ಅಬೂಬಕ್ಕರ್ ನೂಜಿ ಉಪಸ್ಥಿತರಿದ್ದರು.