


ವಿಟ್ಲ: ಕುದ್ದುಪದವು ಆಶ್ರಮ ಶಾಲೆಯ ಶಾಶ್ವತ ಕಾಮಗಾರಿಯಾಗಿ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ನಿರ್ಮಿಸಲಾದ ನೂತನ ಶಾಲಾ ಪ್ರವೇಶ ದ್ವಾರವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು ಉದ್ಘಾಟಿಸಿದರು. ಸುವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಪೈ ಅಡ್ಯನಡ್ಕ ಧ್ವಜಾರೋಹಣ ನೆರವೇರಿಸಿದರು. ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಗೌರವ ಸಲಹೆಗಾರ ರಮೇಶ ಯಂ. ಬಾಯಾರು, ನಿವೃತ್ತ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪಿ. ರೇವಣ್ಣ ನಾಯ್ಕ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಬಾಲಕೃಷ್ಣ ಕಾರಂತ ಎರುಂಬು, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಕಾಶ್ ರೈ ಕಲ್ಲಂಗಳ, ಮೇಲ್ವಿಚಾರಕಿ ಪ್ರಮೀಳಾ ಹೆಚ್., ಕೋಶಾಧಿಕಾರಿ ಗೋವಿಂದ ರಾಯ ಶೆಣೈ, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಸದಸ್ಯೆ ದಿವ್ಯ ಮೈರ, ಶಿಕ್ಷಕಿ ಭವ್ಯ ಪಿ. ಉಪಸ್ಥಿತರಿದ್ದರು.


