ವಿಟ್ಲ: ಕೇಪು ಶ್ರೀ ಕೈಲಾಸೇಶ್ವರ ದೇವ ಸನ್ನಿಧಿ, ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ 6 ರಿಂದ ರಾತ್ರಿ 12 ರ ತನಕ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೋಟಿ ಪಂಚಾಕ್ಷರಿ ಜಪ, ನಮಃ ಶಿವಾಯ ಪಂಚಾಕ್ಷರಿ ನಾಮ ಸ್ಮರಣೆ, 1008 ಕಲಶ ರುದ್ರಾಭಿಷೇಕ, ಕೈಲಾಸೇಶ್ವರ ದೇವರಿಗೆ, ಗಣಪತಿ, ದುರ್ಗೆ, ನಾಗದೇವರಿಗೆ ವಿಶೇಷ ಪೂಜೆ, ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪಡಿಪೂಜೆ, ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಎನ್. ರವೀಶ್ ಖಂಡಿಗ, ಟ್ರಸ್ಟಿಗಳು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.