


ಕೇಪು: ಶ್ರೀ ಕೈಲಾಸೇಶ್ವರ ದೇವರ ಸನ್ನಿಧಿ ಹಾಗೂ ಶ್ರೀ ಅಯ್ಯಪ್ಪ ದೇವರ ಸನ್ನಿಧಾನದಲ್ಲಿ ಫೆ. 13 ರಂದು ಸಂಕ್ರಮಣದ ಅಂಗವಾಗಿ ಶಿವ ದೇವರಿಗೆ, ಪರಿವಾರ ಶಕ್ತಿಗಳಾದ ಶ್ರೀ ಗಣಪತಿ, ಶ್ರೀ ದುರ್ಗಾ ದೇವಿಗೆ ವಿಶೇಷ ಪೂಜೆ, ಅಭಿಷೇಕ, ನಾಗದೇವರಿಗೆ ತಂಬಿಲ ಸೇವೆ ನಡೆಯಲಿದೆ. ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪ್ರಾತಃ ಕಾಲದಿಂದ ದೇವರ ದರ್ಶನ, ವಿಶೇಷ ಪೂಜೆ, ಅಭಿಷೇಕ, ರಾತ್ರಿ ಪಡಿಪೂಜೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರವೀಶ್ ಕೆ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


