ಬಂಟ್ವಾಳ: ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಫೆ.19ರಿಂದ ಆರಂಭಗೊಂಡಿದ್ದು, ಫೆ.25ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ಫೆ.19ರಂದು ಸಂಜೆ ಪ್ರಾರ್ಥನೆ,ಧ್ವಜಾರೋಹಣ, ಸಪ್ತೋತ್ಸವ ಆರಂಭ ಮೊದಲಾದ ಕಾರ್ಯಕ್ರಮಗಳು ನಡೆದಿದೆ. ಫೆ.20ರಂದು ಬೆಳಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ, ರಾತ್ರಿ ನಿತ್ಯ ಉತ್ಸವಗಳು, ಫೆ.21ರಂದು ಮಹಾಶಿವರಾತ್ರಿ ಜಾಗರಣೆ, ಬೆಳಗ್ಗೆ ದರ್ಶನ ಬಲಿ, ಕಂಚು ಬೆಳಕು ಸೇವೆಗಳು, ಸಂಜೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಉತ್ಸವ, ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ, ರಾತ್ರಿ ತುಲಾಭಾರ ಸೇವೆ ಪ್ರಾರಂಭ, ರಂಗಪೂಜೆ, ಶತರುದ್ರಾಭಿಷೇಕ,ಭಜನೆ. ಫೆ.22ರಂದು ಚಂದ್ರ ಮಂಡಲ ಉತ್ಸವ,ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ, ಸಂಜೆ ಯಕ್ಷಗಾನ ಶಶಿಪ್ರಭಾ ಪರಿಣಯ, ಜಾಂಬವತಿ ಕಲ್ಯಾಣ. ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಶ್ರೀ ಪಾರ್ವತಿ ಪರಮೇಶ್ವರ ದೇವರ ಭೇಟಿ, ಚಂದ್ರ ಮಂಡಲ ಉತ್ಸವ, ಫೆ.23ರಂದು ಬೆಳಗ್ಗೆ ಗಂಟೆ 5 ಕ್ಕೆ ಶಯನೋತ್ಸವ, ಕವಾಟ ಬಂಧನ, ಗಂಟೆ 7ಕ್ಕೆ ಕವಾಟೋದ್ಘಾಟನೆ, ಶಯನೋತ್ಸವದ ಪ್ರಸಾದ ವಿತರಣೆ, ಮಹಾರಥೋತ್ಸವ, ದೈವದ ನೇಮೋತ್ಸವ, ಮಹಾಪೂಜೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಫೆ.24ರಂದು ಕಟ್ಟೆ ಪೂಜೆ ಉತ್ಸವ,ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ದರ್ಶನ ಪ್ರಸಾದ,ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ, ಸಂಜೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಸತ್ವ ಪರೀಕ್ಷೆ. ರಾತ್ರಿ ಪಾರ್ವತಿ ಪರಮೇಶ್ವರ ದೇವರ ಭೇಟಿ,ಕಟ್ಟೆಪೂಜೆ ಉತ್ಸವಗಳು, ಶ್ರೀ ಭೂತ ಬಲಿ, ದೇವರ ಶಯನ, ಕವಾಟ ಬಂಧನ, ಫೆ.25 ರಂದು ಬೆಳಗ್ಗೆ ಕವಾಟೋದ್ಘಾಟನೆ,ಮಧ್ಯಾಹ್ನ ಮಹಾಪೂಜೆಗಳು,ಅನ್ನಸಂತರ್ಪಣೆ,ಸಂಜೆ ಅವಭೃತ ಸ್ನಾನಕ್ಕೆ ಹೊರಡುವುದು. ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ, ದೇವರ ಅವಭೃತ ಸ್ನಾನ, ಧ್ವಜ ಅವರೋಹಣ, ಫೆ.26ರಂದು ಬೆಳಗ್ಗೆ ಸಂಪ್ರೋಕ್ಷಣೆ, ಕಲಶ, ಮಹಾಪೂಜೆ, ಅನ್ನಸಂತರ್ಪಣೆ, ಮಹಾ ಮಂತ್ರಾಕ್ಷತೆ, ಫೆ.28ರಂದು ಶ್ರೀ ಕ್ಷೇತ್ರದ ನಾಗ ಸನ್ನಿಧಿಯಲ್ಲಿ ಪವಮಾನಭಿಷೇಕ ಸಹಿತ ನಾಗತಂಬಿಲಗಳು ನಡೆಯಲಿವೆ ಎಂದು ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.