ವಿಟ್ಲ: ಜನಸ್ನೇಹಿಯಾಗಿ ಅಧಿಕಾರಿಗಳು ಕೆಲಸ ನಿರ್ವಹಿಸಿದಾಗ ಇಲಾಖೆ ಮುಂಚೂಣಿಗೆ ಬರುತ್ತದೆ. ಸರಕಾರದ ನಾನಾ ಇಲಾಖೆಗಳು ರೈತರಿಗೆ ನೀಡುವ ಸವಲತ್ತುಗಳನ್ನು ಮಾಹಿತಿ ನೀಡುವ ಕಾರ್ಯವಾಗಬೇಕು. ರೈತರು ಹೈನುಗಾರಿಕೆಯಲ್ಲಿ ಪಡುವ ಕಷ್ಟಕ್ಕೆ ಪೆÇ್ರೀತ್ಸಾಹ ನೀಡುವ ಕಾರ್ಯವಾಗಬೇಕು. ಪಶು ಇಲಾಖೆಗೆ 5 ಸೆಂಟ್ಸ್ ಜಾಗ ಮಂಜೂರಾಗಿದ್ದು, ಹೊಸ ಕಟ್ಪಡಕ್ಕೆ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಎಸ್. ಮಹಮ್ಮದ್ ಹೇಳಿದರು.
ಅವರು ಮಂಗಳವಾರ ಕನ್ಯಾನ ಭಾರತ ಸೇವಾಶ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ, ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲ, ಕನ್ಯಾನ ಹಾಗೂ ಕರೋಪಾಡಿ ಗ್ರಾಮ ಪಂಚಾಯಿತಿ, ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘ, ಕರೋಪಾಡಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ, ಒಡಿಯೂರು ಶ್ರೀ ಗುರುದೇವ ಚಾರಿಟೇಬಲ್ ಟ್ರಸ್ಟ್, ಕನ್ಯಾನ ಭಾರತ ಸೇವಾಶ್ರಮದ ಸಂಯುಕ್ತ ಆಶ್ರಯದಲ್ಲಿ ನಡೆದ ದೇಶೀ ಮತ್ತು ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ಯಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಕಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಜಯರಾಜ್ ಎಸ್. ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯರಾದ ಉಸ್ಮಾನ್ ಹಾಜಿ ಕರೋಪಾಡಿ, ವೆಂಕಟೇಶ್ ಕುಮಾರ್ ಭಟ್ ಬದಿಕೋಡಿ ಬಹುಮಾನ ವಿತರಿಸಿದರು. 48ಕ್ಕೂ ಅಧಿಕ ಹೆಣ್ಣು ಕರುಗಳು ಪ್ರದರ್ಶನದಲ್ಲಿ ಭಾಗವಹಿಸಿದವು.
ಬಂಟ್ವಾಳ ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಹೆನ್ರಿ ಲಸ್ರಾದೊ, ದ. ಕ. ಹಾಲು ಒಕ್ಕೂಟ ಪುತ್ತೂರು ವಿಭಾಗ ಉಪವ್ಯವಸ್ಥಾಕ ಡಾ. ಸತೀಶ್ ರಾವ್, ಮಂಗಳೂರು ದ. ಕ. ಹಾಲು ಒಕ್ಕೂಟ ಉಪವ್ಯವಸ್ಥಾಪಕ ಪ್ರಭಾಕರ, ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಎಂ. ಗಣಪತಿ ಭಟ್, ಕರೋಪಾಡಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷೆ ಗಾಯತ್ರಿ ವಿ. ಭಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ, ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಸುರೇಶ್ ಭಟ್ ಸ್ವಾಗತಿಸಿದರು. ಜಾನುವಾರು ಅಭಿವೃದ್ಧಿ ಅಧಿಕಾರಿ ಶ್ರೀಧರ ಶೆಟ್ಟಿ ಬಹುಮಾನಿತರ ಪಟ್ಟಿ ಓದಿದರು. ಜಾನುವಾರು ಅಧಿಕಾರಿ ಕಾಶಿಮಠ ಈಶ್ವರ ಭಟ್ ವಂದಿಸಿದರು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಶ್ರೀಮಂದಾರ ಜೈನ್ ಕಾರ್ಯಕ್ರಮ ನಿರೂಪಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here