ಬಂಟ್ವಾಳ: ಅಧ್ಯಯನ ಎಂಬುದು ಒಂದು ಕಟ್ಟಡದಂತೆ. ತಳಹದಿ ಭದ್ರವಾಗಿರಬೇಕು ಎಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ನಿರ್ಮಲಾ ಹೇಳಿದರು.
ಇವರು ಕಲ್ಲಡ್ಕ ಶ್ರೀರಾಮ ಪ.ಪೂರ್ವ ವಿದ್ಯಾಲಯದ 2020-21ನೇ ಸಾಲಿನ ವಿಜ್ಞಾನ ವಿಭಾಗದ ವಿಶೇಷ ತರಗತಿಯನ್ನು ಉದ್ಘಾಟಿಸಿ, ಮಾತನಾಡಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಲುವಾಗಿ ವಿದ್ಯಾಥಿಗಳಿಗೆ ಶುಭ ಹಾರೈಸಿದರು. ಸರ್ ಸಿ.ವಿ. ರಾಮನ್ ಅವರ ಜನ್ಮದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುವುದು ಹಾಗೂ ಈ ವರ್ಷ ವಿಜ್ಞಾನದಲ್ಲಿ ಮಹಿಳೆಯರು ಎಂಬ ವಿಷಯವನ್ನು ಆಯ್ಕೆ ಮಾಡಿ, ಮಹಿಳೆಯರ ಸಾಧನೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ್ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕಿ ಕು. ರಮ್ಯಶ್ರೀ ಎನ್. ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.