


ಬಂಟ್ವಾಳ: ಕಲ್ಲಡ್ಕದಲ್ಲಿರುವ ಅಪೂರ್ವ ನೋಟುಗಳ ಸಂಗ್ರಹ ಹಾಗೂ ಪುರಾತನ ವಸ್ತುಗಳ “ಕಲ್ಲಡ್ಕ ಮ್ಯೂಸಿಯಂ”ಗೆ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಸಂಯೋಜಕಿ ರಾಧಿಕಾ ಭಾರಧ್ವಾಜ್ ರವರು ಭೇಟಿ ನೀಡಿ ಪುರಾತನ ವಸ್ತುಗಳು, ಅಪೂರ್ವ ನೋಟುಗಳ ಹಾಗೂ ಸ್ಟ್ಯಾಂಪ್ ಗಳ ಸಂಗ್ರಹವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನೋಟು ಸಂಗ್ರಹಕಾರ ಯಾಸಿರ್ ಕಲ್ಲಡ್ಕ ಮ್ಯೂಸಿಯಂ ನ ವಸ್ತುಗಳನ್ನು ಪರಿಚಯಿಸಿದರು. ಈ ಸಂದರ್ಭ ಐಎಫ್ ಎ ಗ್ರ್ಯಾಂಟಿ ಮೌನೇಶ ವಿಶ್ವಕರ್ಮ, ಜಯಶ್ರೀ ಉಪಸ್ಥಿತರಿದ್ದರು.


