


ಬಂಟ್ವಾಳ: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬದರ್ಕಳ ಗರೊಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಬದರ್ಕಳ ಜಾತ್ರೆ ನಡೆಯಿತು.
ರಾತ್ರಿ ಬೈದೆರ್ ಗಳು ಗರಡಿ ಇಳಿಯುವುದು, ಶ್ರೀ ಬ್ರಹ್ಮ ಬೈದರ್ಕಳ ಜಾತ್ರೆ, ಸುಡು ಮದ್ದು ಪ್ರದರ್ಶನ, ಮಾಣಿಬಾಲೆ ನೇಮ ನಡೆಯಿತು.
ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡು ದೈವಾರಾಧನೆಯ ಭದ್ರನೆಲೆ. ಇದು ಇಲ್ಲಿನ ಮಣ್ಣಿನ ಗುಣವಾಗಿದ್ದು, ಅತಿಮಾನುಷ ಶಕ್ತಿಗಳನ್ನು ಪೂಜಿಸುವ ಇಲ್ಲಿನ ಮಂದಿ ನಂಬಿಕೆಯ ನೆಲೆಗಟ್ಟಿನಲ್ಲಿ ನೆಮ್ಮದಿ ಪಡೆಯುತ್ತಾರೆ. ದೈವ, ದೇವಸ್ಥಾನಗಳು ಶಾಂತಿ, ಸೌಹಾರ್ದತೆಯ ಬೀಡಾಗಿದೆ ಎಂದು ಹೇಳಿದರು.
ತುಳುನಾಡಿನ ಆರಾಧ್ಯ ಪುರುಷರಾದ ಅವಳಿ ವೀರರೆಂದೇ ಪ್ರಸಿದ್ಧಿ ಪಡೆದ ಕೋಟಿ, ಚೆನ್ನಯರು ತುಳು ಜನಪದ ಮನಸ್ಸುಗಳಲ್ಲಿ ಅತ್ಯಂತ ಗಾಢವಾಗಿ ನೆಲೆ ನಿಂತಿರುವ ಸಾಂಸ್ಕೃತಿಕ ಅಂಶಗಳಾಗಿದೆ ಎಂದ ಅವರು ಉತ್ಸವ, ಆಚರಣೆಗಳಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸಮಾನವಾಗಿ ಭಾಗವಹಿಸುವುದರಿಂದ ಸಾಮಾಜಿಕ ಸಾಮರಸ್ಯ ಉಂಟಾಗಿ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಅಮೆರಿಕಾ ನ್ಯೂ ಜೆರ್ಸಿಯ ಶ್ರೀ ಕೃಷ್ಣ ವೃಂದಾವನದ ಪ್ರಧಾನ ಅರ್ಚಕ ವೇ.ಮೂ. ಶ್ರೀ ಯೋಗೀಂದ್ರ ಭಟ್ ಉಳಿ ಅವರು ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿ, ಆಚರಣೆಗಳ ಮಹತ್ವವನ್ನು ಅರಿತು ಅನುಷ್ಠಾನಗೊಳಿಸುವುದರಿಂದ ಉತ್ತಮ ಫಲ ದೊರಕುತ್ತದೆ. ದೈವ, ದೇವಸ್ಥಾನಗಳಲ್ಲಿ ಆರಾಧನೆಯ ಉದ್ದೇಶ ಅರಿತು ಅರ್ಚಿಸಿದಾಗ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ನುಡಿದರು.
ಕಕ್ಯಬೀಡು ಶ್ರೀ ಪಂಚದುರ್ಗಾ ಪರಮೇಶ್ವರೀ ದೇವೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಾಮೋದರ ನಾಯಕ್ ಉಳಿ, ಜಿ.ಪಂ.ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ್ಶೆಟ್ಟಿ, ಕಕ್ಯಪದವು ಎಲ್ಸಿಆರ್ ಶಿಕ್ಷಣ ಸಂಸ್ಥೆ ಸಂಚಾಲಕ ರೋಹಿನಾಥ್ ಪಾದೆ, ಮಂಗಳೂರು ಉದ್ಯಮಿ ಎಂ.ಪಿ.ದಿನೇಶ್, ನಿವೃತ್ತ ಮುಖ್ಯ ಶಿಕ್ಷಕ ಬಾಬು ಪೂಜಾರಿ ಕೋಂಗುಜೆ, ನಿವೃತ್ತ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ಉಳಿ ಸೇ.ಸ.ಬ್ಯಾಂಕ್ ಅಧ್ಯಕ್ಷ ಎ.ಚೆನ್ನಪ್ಪ ಸಾಲ್ಯಾನ್, ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು, ತಾ.ಪಂ.ಸದಸ್ಯ ಸಂಜೀವ ಪೂಜಾರಿ ಮೆಲ್ಕಾರ್, ಕರ್ಲ ಶ್ರೀ ಕೃಷ್ಣ ದೇವಸ್ಥಾನದ ಅಧ್ಯಕ್ಷ ಗುಣಶೇಖರ ಕೊಡಂಗೆ, ಉದ್ಯಮಿ ವಾಸುದೇವ ಭಟ್ ಕುಂಜತ್ತೋಡಿ, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆಗುತ್ತು, ಪ್ರಗತಿಪರ ಕೃಷಿಕರಾದ ಧರ್ಣಪ್ಪ ಪೂಜಾರಿ ಕೋಂಗುಜೆ, ಲಕ್ಷ್ಮಣ ಭಂಡಾರಿ ಪುಣ್ಕೆದಡಿ, ರುಕ್ಮಯ ನಾಯ್ಕ ಮಾಡೋಡಿ, ಸಂಜೀವ ಪೂಜಾರಿ ಕೇರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ಬಿತ್ತ , ಉಳಿ ಸೇ.ಸ.ಸಂಘದ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳು, ನಿವೃತ್ತ ಯೋಧರು, ಅಂಚೆ ಪಾಲಕ, ಗ್ರಂಥಪಾಲಕ, ಕ್ರೀಡಾ ಸಾಧಕರನ್ನು ಸಮ್ಮಾನಿಸಲಾಯಿತು.
ಡೀಕಯ್ಯ ಬಂಗೇರ ಕೆಳಗಿನ ಕರ್ಲ ಸ್ವಾಗತಿಸಿದರು. ಗುರುಪ್ರಕಾಶ್ ವಂದಿಸಿದರು. ಉಪನ್ಯಾಸಕ ಶಿವರಾಜ್ ಗಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.


