ಬಂಟ್ವಾಳ: ಸಂಸ್ಕಾರ, ಧರ್ಮ ಮತ್ತು ದೇವರ ಬಗ್ಗೆ ತಿಳಿದುಕೊಳ್ಳಬೇಕಾದರೆ ಮನಸ್ಸು ಪಕ್ವವಾಗಿರಬೇಕು, ಇದು ಸಾಕಾರಗೊಳ್ಳಬೇಕಿದ್ದರೆ  ಅದಕ್ಕೆ ಪೂರಕ ಶಿಕ್ಷಣ ದೊರಕಬೇಕು ಎಂದು ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯ, ಅಂಬಡೆಮಾರು ಗಂಗಾಧರ ಪೂಜಾರಿ ಮತ್ತು ಕುಟುಂಬದ ವತಿಯಿಂದ ಶುಕ್ರವಾರ  ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ “ಸೌಭಾಗ್ಯ ಸಂಭ್ರಮ” ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಸ್ವಾರ್ಥ ರಹಿತ, ತ್ಯಾಗಮಯ ಮನಸ್ಸು ನಮ್ಮದಾಗಬೇಕಾದರೆ ಅದಕ್ಕೆ ನಾವು ಪಡೆದಿರುವ ಸಂಸ್ಕಾರ, ಕಾನೂನುಗಳು ದೇಶ ಕಲ್ಯಾಣಕ್ಕೆ ಪೂರಕವಾಗಿರಬೇಕು, ಸಂವಿಧಾನದ ಉದ್ದೇಶವೂ ಸುಖೀ ಸಮಾಜ, ಇದನ್ನು ಸಾರ್ಥಕ್ಯಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದುರ್ಬಲ ವರ್ಗವನ್ನು ಮೇಲಕ್ಕೆತ್ತುವ ಕಾರ್ಯದಲ್ಲಿ ಕೈಜೋಡಿಸಬೇಕು, ನುಡಿದಂತೆ ನಡೆಯುವ ಸಂಸ್ಕಾರವನ್ನು ಬೆಳಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರಲ್ಲದೆ, ಎಲ್ಲ ಧರ್ಮ, ಭಾಷೆಯ ಜನರನ್ನು ಪ್ರೀತಿಸುವವರಿಗೆ ದೇವರ ಅನುಗ್ರಹವಿರುತ್ತದೆ ಎಂದರು.

ಬಡಗಕಜೆಕಾರು ಗ್ರಾಪಂ.ಅಧ್ಯಕ್ಷ ಬಿ.ವಜ್ರ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಮಡಂತ್ಯಾರು ಸೇಕ್ರೆಡ್ ಹಾಟ್೯ ಚಚ್೯ ನ ಧರ್ಮಗುರು ಸ್ವಾಮಿ ಬೇಸಿಲ್ ವಾಸ್, ಜಿ.ಪಂ. ಸದಸ್ಯರಾದ ತುಂಗಪ್ಪ ಬಂಗೇರ, ಪದ್ಮಶೇಖರ ಜೈನ್,ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಶ್ರೀ. ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಕೋಡಾಜೆ, ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಮಾಯಿಲಪ್ಪ ಸಾಲಿಯಾನ್, ಜಿಲ್ಲಾ ಕಂಬಳ ಸಮಿತಿಯ ಪ್ರ. ಕಾರ್ಯದರ್ಶಿ ಎಂ.ರಾಜೀವ ಶೆಟ್ಟಿ, ಉಳಿ ಗ್ರಾ.ಪಂ.ಅಧ್ಯಕ್ಷ ಚೆನ್ನಪ್ಪ ಸಾಲಿಯಾನ್, ಬಡಗಕಜೆಕಾರ್ ಗ್ರಾ.ಪಂ. ಮಾಜಿ ಅಧ್ಯಕ್ಷ ಡೀಕಯ್ಯ ಬಂಗೇರ, ಬಡಗಕಜೆಕಾರ್ ಪಂ.ಸದಸ್ಯರಾದ ಪ್ರವೀಣ ಗೌಡ, ಸುರೇಶ್, ನಿವೃತ್ತ ಬ್ಯಾಂಕ್ ಮೆನೇಜರ್ ಬೇಬಿ ಕುಂದರ್, ಕಕ್ಯಪದವು ದೇವಳದ ಮೆನೇಜರ್ ವೀರೇಂದ್ರ ಕುಮಾರ್ ಜೈನ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್. ಐ. ಸೌಮ್ಯ, ಮಂಗಳೂರು ಕಿಟ್ಟೆಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ವಿಠಲ ಅಬುರ, ದಿವಾಕರ ದಾಸ್ ಕಾವಳಕಟ್ಟೆ, ಪ್ರಗತಿಪರ ಕೃಷಿಕರಾದ ರೂಪೇಶ್ ಪೂಜಾರಿ, ರೋಹಿನಾಥ್ ಪೂಜಾರಿ, ವಾಸು ಪೂಜಾರಿ, ಪುರುಷೋತ್ತಮ ಬಂಗೇರ, ದಿವಾಕರ ಕರ್ಲ, ಉದ್ಯಮಿ ಶರತ್ ಕುಮಾರ್, ಮಹಾದೇವ ದೇವೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ವಸಂತ ಮಡಿವಾಳ, ಮಾಜಿ ವಿ.ಎ. ನಾರಾಯಣ, ಸಮಾಜ ಸೇವಕ ಚಿದಾನಂದ ಪೂಜಾರಿ, ಮಡಂತ್ಯಾರ್ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಆನಂದ ದೇವಾಡಿಗ, ಸೇವಾ ಪ್ರತಿನಿಧಿ ಸುಧಾ ರೈ, ವಕೀಲ ರಂಜಿತ್ ಮೈರಾ, ಪಾಂಡವರಕಲ್ಲು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಚೆಂಕ್ಯಾರು, ಉದ್ಯಮಿ ರಾಮಪ್ಪ ಪೂಜಾರಿ, ಅಖಿಲೇಶ್ ಶೆಟ್ಟಿ, ಕಜೆಕಾರು ದೇವಸ್ಥಾನದ ಆಡಳಿತ ಮೊಕ್ತೇಸರ ಯಶೋಧರ ಪೂಜಾರಿ, ಹರೀಶ್ ಪ್ರಭು, ಪ್ರಮೋದ್ ಬಾರ್ದೊಟ್ಟು, ರಾಮಪ್ಪ ಪೂಜಾರಿ ಕಕ್ಯಪದವು ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.

ಅವಿಭಕ್ತ ಕುಟುಂಬಕ್ಕೆ ಸನ್ಮಾನ: ಕಾರ್ಯಕ್ರಮದಲ್ಲಿ ಕಕ್ಯಪದವು ಪೆರಂಗಾಲು ದಿ. ವೆಂಕಪ್ಪಗೌಡ ಅವರ ಅವಿಭಕ್ತ ಕುಟುಂಬವಾದ ಬಾಬುಗೌಡ, ಮುಂಡಪ್ಪಗೌಡ, ಕುಶಾಲಪ್ಪಗೌಡ, ತನಿಯಪ್ಪಗೌಡ ಮತ್ತವರ ಕುಟುಂಬವನ್ನು  ಅಭಿನಂದಿಸಲಾಯಿತು. ಈ ಕುಟುಂಬದ 32 ಮಂದಿ ಸದಸ್ಯರು ಒಂದೇ ಮನೆಯಲ್ಲಿ ವಾಸ್ತವ್ಯವಿದ್ದು, ಇವರು ತಮ್ಮ ಕಂಬಳ ಕೋಣದ ಜೊತೆಯಲ್ಲಿ  ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಕುಟುಂಬದ ಹಿರಿಯರ ಸಹಿತ ಕಂಬಳಕೋಣಕ್ಕು ಹಾರಹಾಕಿ ಆರತಿ ಬೆಳಗಿ ಗೌರವಿಸಲಾಯಿತು.          10 ಬಾಲಕಿಯರಿಗೆ ನೆರವು:  ಹಾಗೆಯೇ 10 ಬಡಕುಟುಂಬದ ಬಾಲಕಿಯರಿಗೆ ವಿವಾಹ ಮಹೋತ್ಸವಕ್ಕಾಗಿ ಆರ್ಥಿಕ ನೆರವನ್ನು ವಿತರಿಸಲಾಯಿತು.ಈ ನಗದನ್ನು ಗಂಗಾಧರ್ ಅವರು ತಮ್ಮ ಪಂಚಾಯತ್ ಸದಸ್ಯತ್ವದ ಗೌರವಧನಕ್ಕೆ ಒಂದಷ್ಟು  ಹಣವನ್ನು ಸೇರಿಸಿ  ತಲಾ 18 ಸಾ.ರೂ. ನಂತೆ  ಬಾಲಕಿಯರ ಹೆಸರಿನಲ್ಲಿ ಸಂಬಂಧಿಸಿದ ಬ್ಯಾಂಕ್ ನಲ್ಲಿ ಜಮೆ ಮಾಡಲಾಯಿತು. ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸ್ಥಳೀಯ ಎರಡು ಪ್ರಗತಿಬಂಧ ಸಂಘಗಳನ್ನು, ಸುಧಾಕರ ಶೆಣೈ ದಂಪತಿ ಖಂಡಿಗ, ಸಂಜೀವ ಶೆಟ್ಟಿ ಬೆಳ್ತಂಗಡಿ, ಕಜೆಕಾರು ಮಹಾದೇವ ದೇವೇಶ್ವರ ಭಜನಾ ಮಂಡಳಿಯನ್ನು ಅಭಿನಂದಿಸಲಾಯಿತು. ಗ್ರಾಮದಲ್ಲಿ ಸ್ವಾವಲಂಬಿ ಜೀವನ ನಡೆಸುವ ವೃದ್ದೆ ವೀರಮ್ನ ನಾಯ್ಕೆದಿ ಗುಂಡಿದೊಟ್ಟು ಅವರನ್ನು ಸನ್ಮಾನಿಸಲಾಯಿತಲ್ಲದೆ ಅವರಿಗೆ ನಡೆದಾಡಲು  ಊರುಗೋಲನ್ನು ವಿತರಿಸಲಾಯಿತು.

ಕಾರ್ಯಕ್ರಮದ ರೂವಾರಿ, ಗ್ರಾ.ಪಂ. ಸದಸ್ಯ ಗಂಗಾಧರ ಪೂಜಾರಿ ಅವರ ಪತ್ನಿ ಚಂದ್ರಾವತಿ  ವೇದಿಕೆಯಲ್ಲಿದ್ದರು. ಕಂಬಳ ಉದ್ಘೋಷಕ ಪ್ರಕಾಶ್ ಕರ್ಲ ಸ್ವಾಗತಿಸಿದರು. ದೇವದಾಸ್ ಕಜೆಕಾರು ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here