


ಕೈಕಂಬ: ಬಡಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 2.5 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಫೆ.15ರಂದು ಶನಿವಾರ ಚಾಲನೆ ನೀಡಿದರು. ತೆಂಕಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಾಗುಡ್ಡೆಯವರೆಗಿನ ಸುಮಾರು 1.50 ಕೋಟಿ ರಸ್ತೆ ಅಭಿವೃಧ್ಧಿಗೆ ಗುದ್ದಲಿ ಪೂಜೆ ನೆರೆವೇರಿಸಿದರು. ನಂತರ ಶಾಸಕರು ಮಾತನಾಡುತ್ತಾ, ಮುಂದಿನ ಮೂರು ವರ್ಷದ ಶಾಸಕನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃಧ್ಧಿ ದೃಪ್ಠಿಯಲ್ಲಿ ಕೆಲಸ ಮಾಡುವತ್ತ ಗಮನ ಹರಿಸಿದ್ದು ರಾಜ್ಯದಲ್ಲಿ ಬಂಟ್ವಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದರು.
ಬಡಗಬೆಳ್ಳೂರು ಗ್ರಾಮದ ದೂಪೆಮಾರು ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂಪಾಯಿ, ನೆಲ್ಲಿಮಾರು ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂಪಾಯಿ, ಅಂಬೋಡಿಮಾರು ರಸ್ತೆ ಕಾಂಕ್ರೀಟುಕರಣಕ್ಕೆ 10 ಲಕ್ಷ ರೂಪಾಯಿ, ಬಟ್ಟಾಜೆ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ಹಾಗೂ ತೆಂಕ ಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಾಗುಡ್ಡೆ ರಸ್ತೆ ಅಭಿವೃದ್ಧಿಗೆ 1.5 ಕೋಟಿ, ತೆಂಕಬೆಳ್ಳೂರು ಗ್ರಾಮದ ಕೆಳಗಿನ ಕಮ್ಮಾಜೆ ನಾಗಬನದವರೆಗೆ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ, ಶ್ರೀ ಕಾವೇಶ್ವರ ದೇವಸ್ಥಾನದ ಬಳಿ ತಡೆಗೋಡೆ ರಚನೆಗೆ 5 ಲಕ್ಷ ರೂಪಾಯಿ, ಅನುದಾನದಲ್ಲಿ ಕಾಮಗಾರಿಗಳು ನಡೆಯಲಿದ್ದು ಚಾಲನೆ ನೀಡಲಾಯಿತು.
ಕಾಮಗಾರಿ ಉದ್ಘಾಟನೆ: ಬಡಗಬೆಳ್ಳೂರು ಗ್ರಾಮದ ಗುಡ್ಡೆಯಂಗಡಿ ಕೋಡಿಮಜಲು ರಸ್ತೆಗೆ 10 ಲಕ್ಷ, ಕೇಪ್ಲಾಡ್ಕ ರಸ್ತೆಗೆ 5 ಲಕ್ಷ, ತೆಂಕಬೆಳ್ಳೂರು ಗ್ರಾಮದದಲ್ಲಿ 10ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಕಾಗುಡ್ಡೆ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಯಶವಂತ ಪೂಜಾರಿ ಪೊಳಲಿ, ಬಂಟ್ವಾಳ ಮಂಡಲ ಬಿಜೆಪಿ ಉಪಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ನಂದಪ್ಪ ರೈ, ರಮೇಶ್ ಬಟ್ಟಾಜೆ, ಪ್ರಕಾಶ್ ಆಳ್ವ, ಉಮೇಶ್ ಶೆಟ್ಟಿ ಪರಿಮೊಗರು, ಬಡಗಬೆಳ್ಳೂರು ಬೂತ್ ಬಿಜೆಪಿ ಅಧ್ಯಕ್ಷ ರತ್ನಕಾರ ಪೂಜಾರಿ, ಕಾರ್ಯದರ್ಶಿ ವಿಠಲ ಪೂಜಾರಿ, ಸವಿತಾ ಎನ್ ಶೆಟ್ಟಿ, ವೀಣಾ ಭಟ್, ಗಂಗಾಧರ ರೈ, ತಿರುಲೇಶ್, ಸಾಕೇತ್ ಶೆಟ್ಟಿ,
ಸಂದೀಪ್, ತಿಮ್ಮಪ್ಪ, ನಿರಂಜನ ಶೆಟ್ಟಿ, ಶ್ರೀನಿವಾಸ, ಸುಧೀರ್ ಪೂಂಜ, ಇಂಜೀನೀಯರ್ಗಳಾದ ಅರುಣು ಪ್ರಕಾಶ್ ಹಾಗೂ ಅಜಿತ್ ಗುತ್ತಿಗೆದಾರ ಯಶೋಧರ ಕಲ್ಕುಟ ಉಪಸ್ಥಿತರಿದ್ದರು.


