Friday, April 5, 2024

ಮಂಗಿಲಪದವು : ಕಬಡ್ಡಿ ಪಂದ್ಯಾಟ, ಸನ್ಮಾನ

ವಿಟ್ಲ : ಮಂಗಿಲಪದವು ನ್ಯಾಶನಲ್ ಯುವಕ ಮಂಡಲ ಇದರ ಆಶ್ರಯದಲ್ಲಿ 60 ಕೆ.ಜಿ.ವಿಭಾಗದ ಹಾಗೂ ಸ್ಥಳೀಯ ಆಟಗಾರರನ್ನೊಳಗೊಂಡ 6 ತಂಡಗಳ ಲೀಗ್ ಕಬಡ್ಡಿ ಪಂದ್ಯಾಟ ನಡೆಯಿತು.
ವಿಟ್ಲ ಪೊಲೀಸ್ ಠಾಣಾಧಿಕಾರಿಯಾಗಿ ನಿಯುಕ್ತಿಗೊಂಡ ವಿನೋದ್ ಎಸ್ ಅವರಿಗೆ ಅಭಿನಂದನಾ ಸಮಾರಂಭವು ಶುಕ್ರವಾರ ಮಂಗಿಲಪದವಿನಲ್ಲಿ ನಡೆಯಿತು.
ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದ ವಿಟ್ಲ ಠಾಣಾಧಿಕಾರಿ ವಿನೋದ್.ಎಸ್ ಮಾತನಾಡಿ ಯುವಜನತೆ ಯಾವುದೇ ರೀತಿಯ ದುಶ್ಚಟ, ಸಮಾಜ ಬಾಹಿರ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಇಂತಹ ಕ್ರೀಡಾ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿ ಉತ್ತಮವಾದ ಬದುಕು ರೂಪಿಸುವಂತಾಗಲಿ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಯುವಕ ಮಂಡಲದ ಗೌರವಾಧ್ಯಕ್ಷ ಮಹಾಲಿಂಗ ಭಟ್ ಮಾತನಾಡಿದರು.
ವೀರಕಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ಸದಸ್ಯ ಉಬೈದ್.ಕೆ, ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಸದಸ್ಯ ಕೆ.ಎಸ್.ಹಮೀದ್ ಕಂಬಳಬೆಟ್ಟು, ನ್ಯಾಯವಾದಿ ಆಲ್ವಿನ್ ಪ್ರಶಾಂತ್, ವಿಟ್ಲ ಠಾಣಾ ಸಿಬ್ಬಂದಿ ಸಂಜೀವ, ಯೂಸುಫ್ ಮಂಗಿಲಪದವು, ಸುಲೈಮಾನ್ ಒಕ್ಕೆತ್ತೂರು, ಹಿರಿಯ ಕಬಡ್ಡಿ ಆಟಗಾರರಾದ ಮಜೀದ್ ಮಾಣಿ, ಪದ್ಮನಾಭ ಕನಪಾದೆ ಹಾಗೂ ಇಕ್ಬಾಲ್ ಕೊಡಂಗೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಂದ್ಯಾಟದ ಸಂಚಾಲಕ ಮುಹಮ್ಮದ್ ಶಾಲಿಹ್ ಸ್ವಾಗತಿಸಿದರು. ಯುವಕ ಮಂಡಲ ಉಪಾಧ್ಯಕ್ಷ ರಘುನಾಥ್ ಕೆಲಿಂಜ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

More from the blog

ಸಾವು ಗೆದ್ದು ಬಂದ ಸಾತ್ವಿಕ್ ; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ...

ಕಲ್ಲಡ್ಕ: ಖಾಸಗಿ ಬಸ್ಸಿಗೆ ಪಿಕಪ್ ಢಿಕ್ಕಿ: ಹಲವರಿಗೆ ಗಾಯ

ವಿಟ್ಲ: ವಿಟ್ಲ ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ. ವಿಟ್ಲ ಕಡೆಗೆ ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ಒಯ್ಯುತ್ತಿದ್ದ ಪಿಕಪ್ ಆಕಸ್ಮಿಕವಾಗಿ ವಿಟ್ಲದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಸಿಗೆ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ವಿಟ್ಲ : ಮಹಿಳೆ ಆತ್ಮಹತ್ಯೆ

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕುಂಟುಕುಡೇಲು ಕಾಪಿಕಾಡು ನಿವಾಸಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿ.ರಾಮಣ್ಣ ನಾಯ್ಕ ಅವರ ಪತ್ನಿ ಸುಶೀಲಾ ಅವರು ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.