ವಿಟ್ಲ: ಅಕ್ರಮವಾಗಿ ಕೂಟ ಸೇರಿ ಜುಗಾರಿ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಎಸ್ ಐ ವಿನೋದ್ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ೨೯೨೦೦ನಗದು ಮತ್ತು ೪ ಮೊಬೈಲ್ ಹಾಗೂ 5 ಮಂದಿಯನ್ನು ವಶಕ್ಕೆ ಪಡೆದ ಘಟನೆ ಪೆರುವಾಯಿ ಸಮೀಪ ನಡೆದಿದೆ.
ಪೆರುವಾಯಿ ಸಮೀಪದ ಮುಕುಡಾಪು ನಿರ್ಜನವಾದ ಸರ್ಕಾರಿ ಪ್ರದೇಶದಲ್ಲಿ ಹಣವಿಟ್ಟು ಜುಗಾರಿ ಆಡುತ್ತಿದ್ದ ಬಗ್ಗೆ ಠಾಣೆಗೆ ಖಚಿತ ಮಾಹಿತಿ ಲಭಿಸಿದೆ. ಈ ಹಿನ್ನಲೆಯಲ್ಲಿ ದಾಳಿ ನಡೆದಿದ್ದು, ಸುಮಾರು ೫ ಮಂದಿಯನ್ನು ವಶಕ್ಕೆ ವಿಚಾರಣೆ ನಡೆಸಿದ್ದಾರೆ. ಪೊಲೀಸ್ ಸ್ಥಳಕ್ಕೆ ತೆರಳುತ್ತಿದ್ದಂತೆ ಓರ್ವ ಪಲಾಯನ ಗೈದಿದ್ದಾನೆ. ಸ್ಥಳದಿಂದ ಸುಮಾರು ೪ ಮೊಬೈಲ್ ಹಾಗೂ ೨೯೨೦೦ನಗದು ಸೇರಿ ೪೮ ಸಾವಿರದ ಸೊತ್ತು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.