ಬಂಟ್ವಾಳ : ಬೆಂಗಳೂರಿನ ರೈಲ್ವೆ ಎಡಿಜಿಪಿ ಯಾಗಿ ಮುಂಬಡ್ತಿ ಹೊಂದಿ ವರ್ಗಾವಣೆ ಗೊಂಡಿರುವ ಮಂಗಳೂರು ಐ.ಜಿ.ಪಿ.ಅರುಣ್ ಚಕ್ರವರ್ತಿ ಅವರು ಇತಿಹಾಸ ಪ್ರಸಿದ್ಧ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭಾ ಕ್ಷೇತ್ರ ಕ್ಕೆ ಬೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಕಳೆದ ಮೂರು ವರ್ಷಗಳ ಹಿಂದೆ ನಂದಾವರ ದಲ್ಲಿ ನೇತ್ರಾವತಿ ನದಿಯಲ್ಲಿ ನೀರಿಗೆ ಬಿದ್ದು ಕೊಚ್ಚಿ ಹೋಗುತ್ತಿದ್ದ ಎರಡು ಬಡ ಜೀವಗಳನ್ನು ರಕ್ಷಣೆ ಮಾಡಿದ ಇಲ್ಲಿನ ಅರ್ಚಕರೋರ್ವರನ್ನು ಗೌರವಿಸಿದರು.
2017 ರಲ್ಲಿ ಮಳೆಗಾಲದ ಲ್ಲಿ ಉತ್ತರಕ್ರಿಯೆಯ ಪಿಂಡ ಪ್ರಧಾನ ಮಾಡಲು ಬಂದಿದ್ದ ವಿಟ್ಲ ಬೈರಿಕಟ್ಟೆ ಕುಟುಂಬ ವೊಂದರ
ತಂದೆ ಮಗ ನೀರಿನಲ್ಲಿ ಸ್ನಾನ ಮಾಡಲು ನದಿಗೆ ಇಳಿದ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿಹೋಗುವುದನ್ನು ಕಂಡು ಜೀವದ ಹಂಗು ತೊರೆದು ನೀರಿಗೆ ದುಮುಕಿ ಇಬ್ಬರನ್ನು ರಕ್ಷಣೆ ಮಾಡಿದ ದೇವಸ್ಥಾನದ ಅರ್ಚಕ ಪ್ರಕಾಶ್ ಮರಾಠೆ ಅವರನ್ನು ಬೆಂಗಳೂರು ಎ.ಡಿ.ಜಿ.ಪಿ ಅಗಿ ಮುಂಭಡ್ತಿ ಹೊಂದಿದ ಮಂಗಳೂರು ಐ.ಜಿ.ಪಿ. ಅರುಣ್ ಚಕ್ರವರ್ತಿ ಅವರು ದೇವಸ್ಥಾನದ ಲ್ಲಿ ಗೌರವಿಸಿದರು.
ಈ ಸಂದರ್ಭದಲ್ಲಿ ಎ.ಡಿ..ಜಿ.ಪಿ ಯಾಗಿ ಮುಂಬಡ್ತಿಹೊಂದಿದ ಅರುಣ್ ಚಕ್ರವರ್ತಿ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ವೇದಮೂರ್ತಿ ಮಹೇಶ್ ಭಟ್ , ನಂದಾವರ ದೇವಾಲಯದ ಮ್ಯಾನೇಜರ್ ರಾಮಕೃಷ್ಣ ಭಂಡಾರಿ, ಸ್ಥಳೀಯ ರಾದ ಪ್ರವೀಣ್ ಗಟ್ಟಿ, ಸುರೇಶ್, ಲಕ್ಷಣ ನಂದಾವರ, ಯೋಗೀಶ್ ನಂದಾವರ, ಗಣೇಶ್ ದೇವಾಡಿಗ, ಕೇಶವ ಆಚಾರ್ಯ, ಡಿ.ವೈ.ಎಸ್.ಪಿ.ಗಳಾದ ನಟರಾಜ್ , ವೆಲಂಟೈನ್ ಡಿ.ಸೋಜ, ನಗರ ಠಾಣಾ ಎಸ್. ಐ.ಅವಿನಾಶ್, ಸಿಬ್ಬಂದಿಗಳಾದ ಪ್ರಶಾಂತ್ ಶೆಟ್ಟಿ , ಸೀತಾರಾಮ, ವಿಜಯ್, ಮತ್ತಿತರರು ಉಪಸ್ಥಿತರಿದ್ದರು.