ಬಂಟ್ವಾಳ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬಂಟ್ವಾಳ ಸಮಿತಿಯ ಸಲಹೆಗಾರ, ವಿಜಯ ಬ್ಯಾಂಕ್ ನ ಮಾಜಿ ಪ್ರಬಂಧಕ, ಬಂಟ್ವಾಳ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ಅವರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗುರು ಸಾಯನ ಬೈದ ಅವರ ಪಾದುಕೆಯ 50,000 ಮೊತ್ತದ ಚೆಕ್ಕನ್ನು ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಪ್ರೇಮನಾಥ್ ಕೆ. ಅವರಿಗೆ ಬಿಸಿರೋಡ್ ನ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಹಸ್ತಾಂತರಿಸಿದರು. ಈ ಸಮಯದಲ್ಲಿ ತಾಲೂಕು ಕಾರ್ಯದರ್ಶಿ ವಿಜಿತ್ ಕೋಟ್ಯಾನ್, ಪ್ರಚಾರ ಸಂಚಾಲಕ ಜಗದೀಶ್ ಕೊಯ್ಲ, ಹೊರೆಕಾಣಿಕೆ ಸಂಚಾಲಕರಾದ ಭುವನೇಶ್ ಪಚ್ಚಿನಡ್ಕ,ಇಂದಿರೇಶ ಬಿ. ವಿಶ್ವನಾಥ್ ಗಣೇಶ್ ಟೈಯರ್ ,ಗೋಪಾಲ್ ಸುವರ್ಣ ,ಸಂಜೀವ ಪೂಜಾರಿ ಗುರುಕೃಪ ಸತೀಶ್ ಅಮರ್ ಜೆರಾಕ್ಸ್ ಮತ್ತಿತರರು ಉಪಸ್ಥಿತರಿದ್ದರು.