ಬಂಟ್ವಾಳ: ಮೊದಲ ಮಳೆಗೆ ತಂಪಾಯಿತು ನೆಲ. ಬಂಟ್ವಾಳ ತಾಲೂಕಿನಲ್ಲಿ ಬೆಳಿಗ್ಗೆ 6 ಗಂಟೆಯಿಂದ ಧಾರಾಕಾರವಾಗಿ ಸುರಿಯುವ ತ್ತಿರುವ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಲ್ಲಿ ಹೆಚ್ಚಾಗಿ ಅಡಿಕೆ ಬೆಳಗಾರರಿದ್ದು, ಧಾರಾಕಾರವಾಗಿ ಸುರಿಯುವ ಮಳೆ ಯಿಂದ ಅಡಿಕೆ ಬೆಳೆಗಾರನ ಒಣಗಲು ಹಾಕಿದ ಅಡಿಕೆಯ ರಾಶಿ ಒದ್ದೆಯಾಗಿ ನಷ್ಟ ಉಂಟಾಗಿದೆ.
ಅಡಿಕೆ ಬೆಳೆಯಲ್ಲಿ ಕನಿಷ್ಠ ಪಕ್ಷ ಮೂರು ಕೊಯ್ಲುಗಳಿದ್ದು ಎರಡು ಕೊಯ್ಲಿನ ಅಡಿಕೆಯ ರಾಶಿಗಳು ಸಂಪೂರ್ಣ ಮಳೆಗೆ ಒದ್ದೆಯಾಗಿದೆ.
ನಿದ್ದೆಯ ಸಮಯವಾದ್ದರಿಂದ ಮುಂಜಾನೆ ಮೋಡ ಕವಿದ ವಾತಾವರಣ ಹೆಚ್ಚಿನ ಕೃಷಿಕರಿಗೆ ಗೊತ್ತಾಗದೆ ಅಡಿಕೆಯನ್ನು ಸುರಕ್ಷಿತವಾಗಿಡಲು ಸಾಧ್ಯವಾಗಿಲ್ಲ.
ಮುಂಜಾನೆಯಿಂದಲೇ ಮೋಡಕವಿದ ವಾತಾವರಣವಿತ್ತು. ಸುಮಾರು 7 ಗಂಟೆಯ ಹೊತ್ತಿಗೆ ಮಳೆ ಆರಂಭವಾಗಿದೆ ಸುಮಾರು ಒಂದವರೆ ತಾಸುಗಳ ವರೆಗೆ ಮಳೆ ಒಂದೇ ಸಮನೆ ಸುರಿದಿದ್ದು ತೋಡುಗಳಲ್ಲಿ ನೀರು ಹರಿದು ಹೋಗಿದೆ. ತುಳು ಭಾಷೆಯಲ್ಲಿ ಮಾಯಿ ತಿಂಗಳಲ್ಲಿ ಮಳೆ ಬಂದರೆ ಬೆಳೆ ಜಾಸ್ತಿಯಾಗುತ್ತದೆ ಎಂಬುದು ಹಿರಿಯರ ನಂಬಿಕೆ. ಕಳೆದ ಕೆಲ ದಿನಗಳಿಂದ ಸೆಕೆ ಹೆಚ್ಚು ಇದ್ದು ಸಹಜವಾಗಿಯೇ ಮಳೆ ಸುರಿದಿದೆ ಎನ್ನಲಾಗುತ್ತಿದೆ.