ಬಂಟ್ವಾಳ: 2019–20ನೇ ಸಾಲಿನಲ್ಲಿ ಪಶುಸಂಗೋಪನೆ ಇಲಾಖೆ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯ ಕ್ರೀಯಾ ಯೋಜನೆಯಡಿ ರೂ. 5000/- ಘಟಕ ವೆಚ್ಚದಡಿಯಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರ ಶಿಪಾರಸ್ಸಿನಂತೆ ಇರಾ ಗ್ರಾಮದ ಬಡಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಸಾರ್ವಜನಿಕರಿಗೆ ಪೌಷ್ಠಿಕ ಆಹಾರ ಯೋಜನೆಯಡಿ ಒಬ್ಬ ಫಲಾನುಭವಿಗೆ 38 ಸಂಖ್ಯೆಯ ಆಸೀಲ್ ಕ್ರಾಸ್/ನಾಟಿ ಕೋಳಿಯಂತೆ 16 ಸಾಮಾನ್ಯ, 4 ಪರಿಶಿಷ್ಠ ಜಾತಿ, 1 ಪರಿಶಿಷ್ಟ ಪಂಗಡ ಒಟ್ಟು 21 ಫಲಾನುಭವಿಗಳಿಗೆ ಉಚಿತವಾಗಿ ಕೋಳಿಗಳ ವಿತರಣಾ ಕಾರ್ಯಕ್ರಮ ಇರಾ ಗ್ರಾಮ ಪಂಚಾಯತ್ ವಠಾರದಲ್ಲಿ ಫೆ.18 ರಂದು ಜರುಗಿತು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಫಲಾನುಭವಿಗಳಿಗೆ ಕೋಳಿಗಳನ್ನು ವಿತರಿಸಿದರು. ಕುಕ್ಕುಟ ಮಹಾಮಂಡಳಿಯ ಸಹಾಯಕ ನಿರ್ದೇಶಕ ಡಾ. ಸುರೇಶ್, ಪಶುವೈದ್ಯಾದಿಕಾರಿ ಡಾ. ಅವಿನಾಶ್ ಭಟ್ ಅವರು ಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರಾದ ಎಂ.ಬಿ. ಉಮ್ಮರ್, ಮೊಯಿದಿ ಕುಂಞಿ, ಪಾರ್ವತಿ, ಜಾನುವಾರು ಅಭಿವೃದ್ದಿ ಅಧಿಕಾರಿ ಕೃಷ್ಣಮೂರ್ತಿ ಜಿ. ಉಪಸ್ಥಿತರಿದ್ದರು.