ಬಂಟ್ವಾಳ: ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಬಂಟ್ವಾಳ ಚಿಣ್ಣರಲೋಕ ಕಲಾವಿದೆರ್ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಫೆ.21 ರಿಂದ ಮಾ.6ರ ತನಕ ನಡೆಯಲಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧೆ ಮುಡಿಪು ಗ್ರಾ.ಪಂ. ಮೈದಾನದಲ್ಲಿ ಎಪಿಜೆ ಅಬ್ದುಲ್ ಕಲಾಂ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಒಟ್ಟು ಉಭಯ ಜಿಲ್ಲೆಯ 13 ತಂಡಗಳು ಬಾಗವಹಿಸಿದ್ದು, ಪ್ರಥಮ ಸ್ಥಾನ ಉಡುಪಿಯ ಕಟಪಾಡಿ ಮಣಿಪುರ, ದ್ವಿತೀಯ ಸ್ಥಾನ ಉಡುಪಿ ಶಿರ್ವ ಮಂಚಕಳ್ ಹಾಗೂ ತ್ರತೀಯ ಸ್ಥಾನ ಕಾಪು ಪೊಳಿಪು ತಂಡ ಪಡೆದುಕೊಂಡಿತು. ಹಾಡುಗಾರಿಕೆಯಲ್ಲಿ ಕೃಷ್ಣಾಪುರ, ತಟ್ಟುವ ಶೈಲಿಯಲ್ಲಿ ಕುಂದಾಪುರ ಹಳವಲ್ಲಿ, ಶಿಸ್ತಿನಲ್ಲಿ ಕೂಳೂರು ಪಂಜಿಮುಗರು ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಸಜೀಪ ಪ್ರಾರ್ಥನೆ ನೆರವೇರಿಸಿ, ಮುಡಿಪು ಸಾಂಬಾರತೋಟ ಮುದರ್ರಿಸ್ ಪಿ.ಕೆ. ರಝಾಕ್ ಅಹ್ಸನಿ ಪರಪ್ಪು ಹಾಗೂ ಉದ್ಯಮಿ ಎಸ್.ಕೆ. ಖಾದರ್ ದಫ್ ಬಾರಿಸುವುದರೊಂದಿಗೆ ಸ್ಪರ್ಧೆಗೆ ಚಾಲನೆ ನೀಡಿದರು. ಸಮಾರಂಭದಲ್ಲಿ ಬಿ.ಕೆ. ಜಬ್ಬಾರ್ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಹಾಗೂ ತಾ.ಪಂ. ಸದಸ್ಯ ಹೈದರ್ ಸಭೆಯನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ಸಂಸ್ಥೆಯ ಸ್ಥಾಪಕ ಪ್ರಧಾನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಮುನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕುಂಞಿ ಬಾವ ಹಾಜಿ ಬಶೀರ್ ಸಾಜಿಗಾರ್ ಮುಹಮ್ಮದ್ ನಂದಾವರ ಮಹಮ್ಮದ್ ಹನೀಫ್ ಬಾಳೆಪುಣಿ, ಹೈದರ್ ಕೈರಂಗಳ, ಇಖ್ಬಾಲ್ ಡಿ ಬೋಳಿಯಾರ್ ಮುಸ್ತಫಾ ಮುಡಿಪು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಫ್ ತೀರ್ಪುಗಾರ ಆರ್.ಕೆ. ಮದನಿ ಅಮ್ಮೆಂಬಳ ಹಾಗೂ ದಫ್ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಹಾರಿಸ್ ಮದನಿ ಪಾಟ್ರಕೋಡಿ ನಾಸಿರ್ ಮಾಸ್ಟರ್ ಬಂಡಾಡಿ ಅವರನ್ನು ಸನ್ಮಾನಿಸಲಾಯಿತು.
ಮುಹಮ್ಮದ್ ನಂದಾವರ ಸ್ವಾಗತಿಸಿ, ಆರ್.ಕೆ. ಮದನಿ ಅಮ್ಮೆಂಬಳ ವಂದಿಸಿದರು.