ಉಜಿರೆ: ಧರ್ಮಸ್ಥಳ ಬಸದಿಯಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಿಂಬವನ್ನು ಭದ್ರಲೇಪನಗೊಳಿಸಿದ ಪ್ರಯುಕ್ತ ಹಾಗೂ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಅಷ್ಟದಿಕ್ಷುಧಾಮ ಸಂಪ್ರೋಕ್ಷಣೆ, ಗಂಧಯಂತ್ರಾರಾಧನೆ ಮಂತ್ರನ್ಯಾಸ, ಅಕ್ಷರನ್ಯಾಸ, ಶ್ರೀ ಸ್ವಾಮಿಯ ಪ್ರತಿಷ್ಠೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ.ಹೆಗ್ಗಡೆಯವರು ಮತ್ತು ಕುಟುಂಬದವರು ಪೂಜೆಯಲ್ಲಿ ಭಾಗವಹಿಸಿದರು.
ಪೂಜ್ಯ ದಿವ್ಯಸಾಗರ್ ಮುನಿ ಮಹಾರಾಜರು ಮತ್ತು ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕರು ಉಪಸ್ಥಿತರಿದ್ದರು.
ಸಂಜೆ ಭವ್ಯ ಅಗ್ರೋದಕ ಮೆರವವಣಿಗೆ ಬಳಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ 216 ಕಲಶಗಳಿಂದ ಅಭಿಷೇಕ, ಉತ್ಸವ ನಡೆಯಿತು.