ಬಂಟ್ವಾಳ: ಬಂಟ್ವಾಳ ಪೊಲೀಸ್ ಸರ್ಕಲ್ ವ್ಯಾಪ್ತಿಯ ಸಜೀಪಮೂಡ ಗ್ರಾಮದ ನಗ್ರಿ ಶಾಂತಿನಗರದಲ್ಲಿ ತಸ್ಲೀಮ್ ಯಾನೆ ಮುತಾಸಿಮ್‌ನ ಮೃತದೇಹವು ಪತ್ತೆಯಾಗಿದ್ದು, ಈ ಪ್ರಕರಣದ ತನಿಖಾ ಕಾರ್ಯವನ್ನು ಗುಲ್ಬಾರ್ಗಾ ಪೊಲೀಸರೇ ನಡೆಸಲಿದ್ದಾರೆ.

ತಸ್ಲೀಮ್ ಗುಲ್ಬರ್ಗಾ ಜಿಲ್ಲೆಯಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಆತನನ್ನು ವಿರೋಧಿ ಗ್ಯಾಂಗ್ ಅಪಹರಣ ನಡೆಸಿತ್ತು. ಇದಕ್ಕೆ ಸಂಬಧಿಸಿಸಂಬಂಧಿಸಿ ಜ. ೩೧ರಂದು ಜೇವರ್ಗಿ ಪೊಲೀಸ್ ಸರ್ಕಲ್ ವ್ಯಾಪ್ತಿಯ ನೇಲೊಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ಇದೇ ವಿಚಾರದಲ್ಲಿ ಅಲ್ಲಿನ ಪೊಲೀಸರು ಕೆಲವರನ್ನು ವಶಕ್ಕೆ ಕೂಡ ಪಡೆದಿತ್ತು.
ಅಪಹರಣ ನಡೆಸಿದ ತಂಡವನ್ನು ಅಲ್ಲಿನ ತನಿಖಾಧಿಕಾರಿ ಬೆನ್ನಟ್ಟಿ ಬರುತ್ತಿದ್ದು, ಹೀಗಾಗಿ ಕೊಲೆ ಪ್ರಕರಣವನ್ನೂ ಅವರೇ ತನಿಖೆ ನಡೆಸಲಿದ್ದಾರೆ. ಆರೋಪಿಗಳು ಮೃತದೇಹವನ್ನು ನಗ್ರಿ ಶಾಂತಿನಗರದಲ್ಲಿ ಬಿಟ್ಟು ಪರಾರಿಯಾಗಿರುವುದರಿಂದ ಗುಲ್ಬಾರ್ಗಾ ಪೊಲೀಸರಿಗೆ ಸಹಕಾರ ನೀಡುವ ಕಾರ್ಯವನ್ನು ಬಂಟ್ವಾಳ ಪೊಲೀಸರು ನಡೆಸಲಿದ್ದಾರೆ ಎಂದು ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ತಿಳಿಸಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here