ರೈತ ಮಹಿಳೆಯರಿಗಾಗಿ ಧಾನ್ಯ ಲಕ್ಷ್ಮಿ ಹೊಸ ಯೋಜನೆ ಜಾರಿಗೆ. ಕುಸುಮ್ ಯೋಜನೆ ವಿಸ್ತರಣೆ, ರೈತರ ಪಂಪ್‌ಸೆಟ್ ಸೌರ ವಿದ್ಯುತ್ ಜತೆ ಜೋಡಣೆ, ಫಸಲ್ ಭೀಮಾ ಯೋಜನೆಯಿಂದ 6.11 ಕೋಟಿ ರೈತರಿಗೆ ಅನುಕೂಲವಾಗಿದೆ. ಸಮತೋಲಿತ ರಸಗೊಬ್ಬರ ಬಳಕೆ ಯೋಜನೆ ಜಾರಿ ಮಾಡಲಾಗಿದೆ. ರಾಸಾಯನಿಕ ಗೊಬ್ಬರ ಬದಲು ಸಾವಯವ ಗೊಬ್ಬರ ಬಳಕೆಗೆ ಪ್ರೋತ್ಸಾಹ ನೀಡಲಾಗಿದೆ. ಬರಡು ಭೂಮಿಯಲ್ಲಿ ಸಾವಯವ ಕೃಷಿ ಮಾಡಲು ಪ್ರೋತ್ಸಾಹ. ದೇಶದ ಜಲಕ್ಷಾಮ ಪೀಡಿತ 100 ಜಿಲ್ಲೆಗಳಲ್ಲಿ ಜಲವರ್ಧನೆಗೆ ಕ್ರಮ.

20 ಲಕ್ಷ ರೈತರಿಗೆ ಸೋಲಾರ್ ಪಂಪ್ ವಿತರಣೆ. ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ರೈತರಿಗೆ ಅವಕಾಶ. ಕೃಷಿ ಮಾರುಕಟ್ಟೆ ಉದಾರೀಕರಣಗೊಳಿಸಲು ಕ್ರಮ. ಕೃಷಿ ಅಭಿವೃದ್ದಿಗೆ 16 ಅಂಶಗಳ ಕ್ರಿಯಾ ಯೋಜನೆ ಪ್ರಕಟಗೊಳಿಸಲಾಗಿದೆ.

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ ನೀಡಲಿದೆ. ಕೃಷಿ ಉತ್ಪನ್ನಗಳಿಗಾಗಿ ಇ ಮಾರುಕಟ್ಟೆ ಸ್ಥಾಪನೆ ಮಾಡಲಿದೆ. ಜಾನುವಾರುಗಳ ಕಾಲು ಬಾಯಿ ರೋಗ ತಡೆಗೆ ಕ್ರಮ ಸೇರಿದಂತೆ ಕೃಷಿಗೆ ಮತ್ತು ರೈತರಿಗೆ ಸೇರಿದಂತೆ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ ಬಜೆಟ್ ಇದಾಗಿದೆ.

ಪ್ರಧಾನಿ  ನರೇಂದ್ರ ಮೋದಿಯವರ ದೂರದೃಷ್ಟಿಯೊಂದಿಗೆ ಬಜೆಟ್ ಮಂಡಿಸಿರುವ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು.

* ರಾಜೇಶ್ ನಾಯ್ಕ್ ಉಳಿಪ್ಪಾಡಿ
ಶಾಸಕರು, ಬಂಟ್ವಾಳ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here