ನವದೆಹಲಿ: ಬಜೆಟ್‌ ಮಂಡನೆಯಾಗುತ್ತಿದ್ದಂತೆ ಎಲ್ಲರಿಗೂ ಕುತೂಹಲ. ಕಾಯೋದು ಯಾವುದಕ್ಕೆ ರೇಟ್‌ ಜಾಸ್ತಿ ಆಗಿದೆ, ಯಾವುದಕ್ಕೆ ಇಳಿಕೆ ಆಗಿದೆ ಅನ್ನೊ ಮಾಹಿತಿಗಾಗಿ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತನಲ್ಲಿ ಮಂಡಿಸಿದ 2020-2021ನೇ ಸಾಲಿನ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ ಹೆಚ್ಚಳದಿಂದಾಗಿ ಪೀಠೋಪಕರಣ, ಪಾದರಕ್ಷೆ ಬೆಲೆಗಳು ಏರಿಕೆಯಾಗಲಿವೆ. ಅದೇರೀತಿ ಅಬಕಾರಿ ಸುಂಕದ ಹೆಚ್ಚಳದೊಂದಿಗೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬೆಲೆಗಳು ಏರಿಕೆಯಾಗಲಿವೆ. ವೈದ್ಯಕೀಯ ಸಾಧನಗಳ ಮೇಲೆ ಶೇ.5 ರಷ್ಟು ಹೆಲ್ತ್ ಸೆಸ್, ಆಟೋ ಮೊಬೈಲ್ ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳಗೊಂಡಿದೆ. ವಿದೇಶಗಳಿಂದ ಆಮದು ಮಾಡಿಕೊಂಡ ನ್ಯೂಸ್ ಪ್ರಿಂಟ್ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ. ಅದೇ ರೀತಿ ಎಲೆಕ್ಟ್ರಿಕ್ ವಾಹನಗಳು ಮತ್ತು ಮೊಬೈಲ್ ಫೋನ್‌ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಪ್ಲಾಸ್ಟಿಕ್ ಆಧಾರಿತ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ತೆರಿಗೆ ಇಳಿಸಲಾಗಿದೆ.
ಬೆಲೆ ಏರಿಕೆ : ಪೀಠೋಪಕರಣಗಳು, ಸ್ಯಾಂಡಲ್, ಸಿಗರೇಟ್, ತಂಬಾಕು ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು, ಅಡುಗೆಮನೆಯಲ್ಲಿ ಬಳಸುವ ವಸ್ತುಗಳು, ಕ್ಲೇ ಐರನ್, ಸ್ಟೀಲ್, ಕಾಪರ್,ಸೋಯಾ ಫೈಬರ್, ಸೋಯಾ ಪ್ರೋಟೀನ್, ವಾಣಿಜ್ಯ ವಾಹನಗಳ ಬಿಡಿಭಾಗಗಳು, ವಾಲ್ ಪ್ಯಾನ್ ಗಳು, ಕಚ್ಚಾಸಕ್ಕರೆ, ಕೃಷಿ ಆಧಾರಿತ ಜಾನುವಾರಗಳ, ವಾಣಿಜ್ಯ ವಾಹನಗಳ ಬೆಲೆ, ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳ, ಪೆಟ್ರೋಲ್-ಡೀಸೆಲ್, ಗೋಡಂಬಿ, ತಾಳೆ ಎಣ್ಣೆ, ಬೆಳ್ಳಿ ಆಭರಣಗಳು, ಬಂಗಾರದ ಆಭರಣಗಳು, ಪ್ಲಾಸ್ಟಿಕ್, ರಬ್ಬರ್ ವಸ್ತುಗಳು, ಗ್ಲಾಸ್, ಮುದ್ರಣ ಕಾಗದ ಸಿಸಿಟಿವಿ, ಚಾರ್ಜರ್, ಅಡಾಪ್ಟರ್‌ಗಳ ಬೆಲೆ ಹೆಚ್ಚಳವಾಗಬಹುದು

ಬೆಲೆ ಇಳಿಕೆ: ವಿದೇಶದಿಂದ ಆಮದು ಮಾಡಿಕೊಂಡ ನ್ಯೂಸ್ ಪ್ರಿಂಟ್, ಎಲೆಕ್ಟ್ರಿಕ್ ವಾಹನಗಳು, ಮೊಬೈಲ್ ಫೋನ್‌ಗಳ ಬಿಡಿಭಾಗಗಳು, ಪ್ಲಾಸ್ಟಿಕ್ ಆಧಾರಿತ ಕಚ್ಚಾ ಸರಕು, ಡಯಾಲಿಸಿಸ್ ಯಂತ್ರದ ಬೆಲೆಯಲ್ಲಿ ಇಳಿಕೆ, ಕೃತಕ ಕಿಡ್ನಿ, ಚರ್ಮೋತ್ಪನ್ನ, ಕಾರು, ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಕಡಿಮೆಯಾಗಲಿದೆ, ಬೇಳೆಕಾಳು, ಗೊಬ್ಬರ, ಬೀಜಗಳ ಬೆಲೆಯಲ್ಲಿ ಇಳಿಕೆಯಾಗಬಹುದು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here