


ಬಂಟ್ವಾಳ: ಟೀಮ್ ಗ್ಲೆಡಿಯೇಟರ್ಸ್ನ ಪ್ರಾಯೋಜಕತ್ವದಲ್ಲಿ ಫೆಬ್ರವರಿ 9ರಂದು ಬಿ.ಸಿ.ರೋಡಿನ ಬಸ್ತಿಪಡ್ಪು ಮೈದಾನದಲ್ಲಿ ಬೈಕ್ ರೇಸ್ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಟ್ವಾಳ ಡಿ.ವೈ.ಎಸ್.ಪಿ. ವೆಲಂಟೈನ್ ಡಿ.ಸೋಜ ಮಾತನಾಡಿ, ಪ್ರಯತ್ನವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಾಧನೆಗೆ ಪ್ರೋತ್ಸಾಹ ನೀಡುವುದು ಎಲ್ಲರ ಧರ್ಮವಾಗಬೇಕು.ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನ ಮುಖ್ಯವಲ್ಲ.
ಸೋಲು ಯಾಕೆ ಅಗಿದೆ ಎಂಬ ಆತ್ಮಾವಲೋಕನ ಮಾಡುವುದು ಮತ್ತು ಮುಂದಿನ ಸ್ಪರ್ಧೆಯಲ್ಲಿ ತಪ್ಪನ್ನು ತಿದ್ದುಪಡಿ ಮಾಡಿ ಗೆಲುವು ಸಾಧಿಸಲು ಪ್ರಯತ್ನ ಮಾಡಿದರೆ ಗೆಲುವು ನಮ್ಮದಾಗುತ್ತದೆ. ಬಂಟ್ವಾಳದ ಹೃದಯ ಭಾಗದಲ್ಲಿ ಕ್ರೀಡಾ ಸ್ಪೂರ್ತಿಯ ಬೆಂಕಿ ಹೆಚ್ಚಿ ಸೌಹಾರ್ದ ವೇದಿಕೆ ಸೃಷ್ಟಿ ಮಾಡಿದ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.
ನ್ಯಾಯವಾದಿ ಅಶ್ವಿನ್ ಕುಮಾರ್ ರೈ, ಪ್ರಮುಖರಾದ ಪಿ.ಯುಸ್.ಎಲ್.ರ್ರೋಡಿಗ್ರಸ್, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಬಿ.ವಿಶ್ವನಾಥ್, ಮಹಮ್ಮದ್ ವಳವೂರು, ಅರುಣ್ ಮಾಡ್ತ, ಸುಕುಮಾರ್ ಬಂಟ್ವಾಳ, ಶಿವಪ್ರಸಾದ್ ಬಂಟ್ವಾಳ, ಸುದರ್ಶನ್, ಮೊನಿಶ್ ಆಲಿ, ಜಯರಾಜ್, ಸತೀಶ್ ಅಮರ್ ಗ್ರೂಪ್, ಎಲ್ಸನ್ ಮಿನೇಜಸ್ , ಎಲ್ಸನ್ ಲಾಡ್ ಮೆನೇಜಸ್ ನರಿಕೊಂಬು ನವೀನ್ ಕುಮಾರ್ ಮೈರಾನ್ ಪಾದೆ ಉದಯ ಕುಮಾರ್ ವಗ್ಗ ಪ್ರಸಾದ್ ಮರ್ದೋಳಿ ವಿಜಯ ಪಾಸ್ ಅಲ್ಲಿಪಾದೆ ಅಝೀಜ್ ವಗ್ಗ ಸದಾನಂದ ಸಿದ್ದಕಟ್ಟೆ ಮತ್ತಿತರು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಪ್ರಪ್ರಥಮವಾಗಿ ಬೈಕ್ ರೇಸ್ ಇದಾಗಿದ್ದು, ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ಬೈಕ್ ರೇಸ್ ನಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿಶೇಷ ಚೇತನರ ಚೆಸ್ ಪಂದ್ಯಾಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಯಶಸ್ವಿ ಕೆ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪ್ರಪ್ರಥಮವಾಗಿ ಬೈಕ್ ರೇಸ್ ನಲ್ಲಿ
ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಂಗಳೂರು, ಮಂಗಳೂರು ಹೀಗೆ ರಾಜ್ಯ ನಾನಾ ಭಾಗಗಳಿಂದ ಬೈಕ್ ರ್ಯಾಲಿಗೆ ಸ್ಪರ್ಧಾಳು ಅಲ್ಲದೇ ಕೇರಳ ರಾಜ್ಯದಿಂದಲೂ ಸ್ಪರ್ಧಾಳುಗಳು ಭಾಗವಹಿಸಿದ್ದರು.
.


