


ಬಂಟ್ವಾಳ: ಸುಮಾರು 280 ವರ್ಷಗಳ ಹಿಂದೆಯೆ ದೂರದೃಷ್ಟಿ ಹೊಂದಿದ ಪವಾಡ ಪುರುಷ ಸಂತ ಸೇವಾಲಾಲರು ಪರಿಸರದಲ್ಲಿ ಆಗಬಹುದಾದ ಬದಲಾವಣೆಗಳನ್ನು ಅರಿತಿದ್ದರು. ನಾವು ಸಹ ಪರಿಸರದ ಬಗ್ಗೆ ಕಾಳಜಿ ವಹಿಸಿ ಪರಿಸರ ಸಂರಕ್ಷಣೆಯ ಕೆಲಸ ಮಾಡಬೇಕು ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಅವರು ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಇಂದು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಕಾನ್ ಸ್ಟೇಬಲ್ ಹಿರ್ಯಾ ನಾಯ್ಕ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಂಟಿ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ್ ದಿಕ್ಸೂಚಿ ಭಾಷಣ ಮಾಡುತ್ತಾ, ದೇಹದ ಬೆಳವಣಿಗೆಗಿಂತ ಬುದ್ಧಿಯ ಬೆಳವಣಿಗೆ ಮುಖ್ಯ. ಸಂತ ಸೇವಾಲಾಲರು ಅವಿವಾಹಿತರಾಗಿಯೆ ಉಳಿದು ಸಮಾಜದ ಏಳಿಗೆಗೆ ತಮ್ಮನ್ನು ಸಮರ್ಪಿಸಿಕೊಂಡ ಮಹಾಪುರುಷರು ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಶ್ರೀಧರ್, ಆಹಾರ ಶಿರಸ್ತೇದಾರ್ ಶ್ರೀ ನಿವಾಸ್, ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಶುಕುಮಾರ್, ಸಮಾಜ ಬಾಂಧವ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕೆ.ಹೆಚ್., ಕಾರ್ಯಕಾರಿ ಸಮಿತಿ ಸದಸ್ಯ ಕರಿಬಸಪ್ಪ ನಾಯ್ಕ್, ಸಲಹಾ ಸಮಿತಿ ಸದಸ್ಯರಾದ ಕಲ್ಲುದೇನು ಲಮಾಣಿ,
ತೊಳಚ ನಾಯ್ಕ್, ಲೋಕ ನಾಯ್ಕ್, ಚಂದ್ರಶೇಖರ ನಾಯ್ಕ್, ದಿಲಿಪ್ ಕುಮಾರ್ ರಜಪೂತ್, ತಾರೇಶ್ ನಾಯ್ಕ್, ನಿಕಟಪೂರ್ವ ಸಲಹ ಸಮಿತಿ ಸದಸ್ಯರು, ಕೃಷ್ಣ ನಾಯ್ಕ್ ಸಂಸ್ಕೃತಿಕ ಕಾರ್ಯದರ್ಶಿ, ಲಕ್ಷ್ಮಣ್ ಸದಸ್ಯರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.


