ಬಂಟ್ವಾಳ: ಟೀಮ್ ಗ್ಲೆಡಿಯೇಟರ್‍ಸ್‌ನ ಪ್ರಾಯೋಜಕತ್ವದಲ್ಲಿ ಫೆಬ್ರವರಿ 9ರಂದು ಬಿ.ಸಿ.ರೋಡಿನ ಬಸ್ತಿಪಡ್ಪು ಮೈದಾನದಲ್ಲಿ ಬೈಕ್ ರ್‍ಯಾಲಿ ನಡೆಯಲಿದೆ ಎಂದು ಎಲ್ಸನ್ ಲಾಡ್ ಮೆನೇಜಸ್ ನರಿಕೊಂಬು ಅವರು ತಿಳಿಸಿದ್ದಾರೆ.
ಅವರು ಬಿಸಿರೋಡಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಪ್ರಪ್ರಥಮವಾಗಿ ಬೈಕ್ ರ್‍ಯಾಲಿ ಇದಾಗಿದ್ದು, ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ಬೈಕ್ ರ್‍ಯಾಲಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿಶೇಷ ಚೇತನರ ಚೆಸ್ ಪಂದ್ಯಾಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಯಶಸ್ವಿ ಕೆ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಸನ್ಮಾನಿತರಿಗೆ ವಸ್ತ್ರದಾನದೊಂದಿಗೆ ಗೌರವ ನೀಡಲಾಗುವುದು. ಇದರೊಂದಿಗೆ ಪರಿಸರ ಜಾಗೃತಿ ಕಾರ್ಯಕ್ರಮವೂ ನಡೆಯಲಿರುವುದು. ಹೀಗೆ ವಿನೂತನವಾಗಿ ಕಾರ್ಯಕ್ರಮಗಳು ಮೂಡಿ ಬರಲಿದ್ದು, ಜಿಲ್ಲಾ ಮಟ್ಟದಲ್ಲಿಯೂ ಪ್ರಪ್ರಥಮವಾಗಿ ಬೈಕ್ ರ್‍ಯಾಲಿ ಕಾರ್ಯಕ್ರಮವಾಗಲಿದೆ.


ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಂಗಳೂರು, ಮಂಗಳೂರು ಹೀಗೆ ರಾಜ್ಯ ನಾನಾ ಭಾಗಗಳಿಂದ ಬೈಕ್ ರ್‍ಯಾಲಿಗೆ ಸ್ಪರ್ಧಾಳು ಅಲ್ಲದೇ ಕೇರಳ ರಾಜ್ಯದಿಂದಲೂ ಸ್ಪರ್ಧಾಳುಗಳು ಬರಲಿದ್ದಾರೆ. ಸ್ಪರ್ಧೆಯಲ್ಲಿ ಡ್ರೋನ್ ಕ್ಯಾಮರಾದಿಂದ ವೀಡಿಯೋ ಚಿತ್ರೀಕರಣದಿಂದ ವ್ಯವಸ್ಥೆಯನ್ನು ಹೊಂದಿರುತ್ತದೆ.
2 ಸ್ಟ್ರೋಕ್, 4 ಸ್ಟ್ರೋಕ್, ಇಂಡಿಯನ್ ಓಪನ್, ಓಪನ್ ಕ್ಲಬ್ ಕ್ಲಾಸ್, ಎಕ್ಸ್‌ಪರ್ಟ್ ಕ್ಲಾಸ್, ನೋವೀಸ್, ಸ್ಥಳೀಯ ವಿಭಾಗ ಮತ್ತು ಬೆಸ್ಟ್ ರೈಡರ್ ಹೀಗೆ ಎಂಟು ವಿಭಾಗಗಳಲ್ಲಿ ಬೈಕ್ ರ್‍ಯಾಲಿ ಸ್ಪರ್ಧೆ ನಡಯಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿ ವಿವಿಧ ಗಣ್ಯರೊಂದಿಗೆ ವಿಜೇತರಿಗೆ ನಗದು ಹಾಗೂ ಟ್ರೋಫಿ ನೀಡಲಾಗುವುದು.

ಪತ್ರಿಕಾಗೋಷ್ಟಿಯಲ್ಲಿ ನವೀನ್ ಕುಮಾರ್ ಮೈರಾನ್‌ಪಾದೆ, ಉದಯ ಕುಮಾರ್ ವಗ್ಗ, ಪ್ರಸಾದ್ ಮರ್ದೋಳಿ, ವಿಜಯ ಪಾಸ್ ಅಲ್ಲಿಪಾದೆ,  ಅಝೀಜ್ ವಗ್ಗ, ಸದಾನಂದ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here