ಬಂಟ್ವಾಳ: ಪ್ರತಿಷ್ಠಿತ ಕುಲಾಲ ಸಮಾಜದ ಬಂಟ್ವಾಳ ಸಮಾಜ ಸೇವಾ ಸಹಕಾರಿ ನಿಯಮಿತದ ನಿರ್ದೇಶಕ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಬೆಂಬಲಿತ ಬ್ಯಾಂಕಿನ ಹಾಲಿ ಅಧ್ಯಕ್ಷ ಸುರೇಶ್ ಕುಲಾಲ್ ನೇತೃತ್ವದ ತಂಡ ಜಯಭೇರಿ ಸಾಧಿಸಿದ್ದು,ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ. ಆಡಳಿತಮಂಡಳಿಯ 17 ಸ್ಥಾನಗಳ ಪೈಕಿ 16 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎಸ್ ಸಿ .ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಸುರೇಶ್ ಕುಲಾಲ್, ರಮೇಶ್ ಸಾಲಿಯಾನ್, ವಾಮನ ಟೈಲರ್, ಜಗನ್ನಿವಾಸ ಗೌಡ, ಅರುಣ್ ಕುಮಾರ್, ಸತೀಶ್ ಪಲ್ಲಮಜಲು, ವಿಜಯಕುಮಾರ್, ಪದ್ಮನಾಭ ವಿಟ್ಲ, ಸುರೇಶ್ ಎನ್.ಕುಲಾಲ್, ಜನಾರ್ದನ ಕುಲಾಲ್ ಬೊಂಡಾಲ,ರಮೇಶ್ ಸಾಲಿಯಾನ್ ಗುರುಕೃಪ, ವಿಶ್ವನಾಥ ಕೆ.ಬಿ.ವಿಜಯಲಕ್ಷ್ಮಿ ವಿಟ್ಲ,ಜಯಂತಿ ಕಲ್ಲಡ್ಕ,ವಿದ್ಯಾ ಹಳೇಗೇಟ್ ಜಯಗಳಿಸಿದ್ದರೆ ಗಣೇಶ್ ಚಮಗಾರ ರವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರೆಲ್ಲರೂ ಸಹಕಾರ ಭಾರತಿ ಬೆಂಬಲಿತರಾಗಿದ್ದಾರೆ.ಪಕ್ಷೇತರ ಅಭ್ಯರ್ಥಿ ನಾಗೇಶ್ ಬಾಳೆಹಿತ್ಲು ಅವರು ಜಯಗಳಿಸಿದ್ದರೆ,ಕಾಂಗ್ರೆಸ್ ಬೆಂಬಲಿತರುಶೂನ್ಯ ಸಂಪಾದನೆಯೊಂದಿಗೆ ಮುಖಭಂಗ ಅನುಭವಿಸಿದ್ದಾರೆ. ಸಮಾಜ ಸೇವಾ ಸಹಕಾರಿ ನಿಯಮಿತದ ಚುನಾವಣೆ ಭಾರೀ ಕುತೂಹಲವನ್ನು ಕೆರಳಿಸಿತ್ತು.