ಬಂಟ್ವಾಳ : ಇನ್ನೋವಾ ಕಾರಿನಲ್ಲಿ ಚೂರಿಯಿಂದ ಇರಿದು ಕೊಲೆ ನಡೆಸಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಗ್ರಿ ಸಮೀಪದ ಶಾಂತಿ ನಗರ ಎಂಬಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ರಾಬರಿ ಮತ್ತು ಕೊಲೆ ಆರೋಪಿಯಾಗಿದ್ದು, ಕೇರಳ ಮೂಲದ ನಿವಾಸಿ ತಸ್ಲೀಮ್ (45) ಎಂದು ಗುರುತಿಸಲಾಗಿದೆ.
ಈತ ಕೇರಳದ ನಟೋರಿಯಸ್ ಜಿಯಾ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಈತ ಹಲವಾರು ಅಪರಾಧ ಹಿನ್ನಲೆವುಳ್ಳವನಾಗಿದ್ದ.

2019 ರಲ್ಲಿ ಬಂದರು ಠಾಣಾ ವ್ಯಾಪ್ತಿಯಲ್ಲಿ ಅರುಣ್ ಜ್ಯುವೆಲ್ಲರಿ ಶಾಪ್ ನಲ್ಲಿ ರಾಬರಿ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದುು, ಬಳಿಕ ಅತ ಗುಲ್ಬರ್ಗ ಜೈಲು ಸೇರಿದ್ದ, ಗುಲ್ಬರ್ಗ ಜೈಲಿನಿಂದ ಜಾಮೀನು ಮೂಲಕ ಬಿಡುಗಡೆಯಾಗಿದ್ದ.
ಬಿಡುಗಡೆಯಾದ ಕೂಡಲೇ ಈತನನ್ನು ಗ್ಯಾಂಗ್ ವೊಂದು ಕಾರಿನಲ್ಲಿ ಹಾಕಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗುಲ್ಬರ್ಗ ಪೊಲೀಸ್ ಠಾಣೆಯಲ್ಲಿ ಈತನ ಕಿಡ್ನಾಪ್ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು.

2017 ರಲ್ಲಿ ಉಳ್ಳಾಲದಲ್ಲಿ ನಡೆದ ಖಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ.

ಅತನನ್ನು ಕಾರಿನಲ್ಲಿ ಕುಳ್ಳಿರಿಸಿದ ಗ್ಯಾಂಗ್ ಅತನನ್ನು ಕಾರಿನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಬಳಿಕ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.

ಕಾರಿನ ಹಿಂಬದಿಯ ಸೀಟಿನಲ್ಲಿಯೇ ಕೊಲೆ ಮಾಡಲಾಗಿದೆ. ಬೇರೆ ಯಾವುದೋ ಪ್ರದೇಶದಲ್ಲಿ ಕೊಲೆ ನಡೆಸಿ ಬಳಿಕ ಶಾಂತಿ ನಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ಗುಡ್ಡ ಪ್ರದೇಶದಲ್ಲಿ ಕಾರು ನಿಲ್ಲಿಸಲಾಗಿದೆ.
ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಕಾರು ನಿಂತ ಬಳಿಕ ಕಾರು ಅಲ್ಲಿಯೆ ಮಧ್ಯಾಹ್ನದವರಗೆ ಇದ್ದುದನ್ನು ಗಮನಿಸಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಖಾಲಿಯಾ ರಫೀಕ್ ಕೊಲೆಗೆ ಸೇಡು ತೀರಿಸಿಕೊಂಡಿದೆಯೋ ಅಥವಾ ಇನ್ನಾವುದೋ ಕಾರಣಕ್ಕೆ ಕೊಲೆ ನಡೆಸಿದೆಯಾ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.
ಸುಫಾರಿ ಕಿಲ್ಲರ್ ಗಳು ಈತನ ಕೊಲೆ ನಡೆಸಿರಬೇಕು ಎಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಉಡುಪಿ ಎಸ್.ಪಿ.ವಿಷ್ಟುವರ್ದನ್, ಅಡಿಸನಲ್ ಎಸ್.ಪಿ.ವಿಕ್ರಂ ಅಮ್ಟೆ, ಮಂಗಳೂರು ಡಿ.ಸಿ.ಐ
ಬಿ. ಇನ್ಸ್ ಪೆಕ್ಟರ್ ಚೆಲುವರಾಜು, ಸ್ಥಳಕ್ಕೆ ಬೇಟಿ ನೀಡಿದ್ದಾರೆ.

ಸ್ಥಳದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ನಗರ ಠಾಣಾ ಎಸ್. ಐ.ಅವಿನಾಶ್, ಎ.ಎಸ್.ಐ‌.ಗಳಾದ ಜಯರಾಮ್ ರೈ, ರಮೇಶ್, ಶಿವರಾಮ್ ಸಿಬ್ಬಂದಿಗಳಾದ ಸುರೇಶ್, ಗಿರೀಶ್ ಉದಯ ರೈ, ವಿವೇಕ್, ಜನಾರ್ಧನ, ಬಸಪ್ಪ, ಕುಮಾರ್, ಚಾಲಕರಾದ ವಿಜಯ್, ಕಿರಣ್ ಮತ್ತಿತರರು ಬೇಟಿ ನೀಡಿದ್ದಾರೆ. ‌
ಸ್ಥಳಕ್ಕೆ ಬೆರಳಚ್ಚು ತಜ್ಞ ರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶವವನ್ನು ಮಂಗಳೂರು ವೆನ್ಲಾಕ್ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here