ಬಂಟ್ವಾಳ: ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಜೆಕಲ ಎಂಬಲ್ಲಿ ನಡೆದಿದೆ.
ಕನಪಾದೆ ನಿವಾಸಿ ಕೊರಗಪ್ಪ (65) ಅವರು ಮೃತಪಟ್ಟಿದ್ದಾರೆ.
ಮರದ ಮೇಲೆ ಹತ್ತಿ ಮರದ ಗೆಲ್ಲು ಕಡಿಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಗಂಭೀರ ವಾಗಿ ತಲೆಗೆ ಗಾಯಗೊಂಡಿದ್ದ ಕೊರಗಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ದಾರಿಮಧ್ಯೆ ಅಸುನೀಗಿದ್ದಾರೆ ಎಂದು ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.