ಬಂಟ್ವಾಳ: ಮೂಡಿಗೆರೆ ಟಿಕೆಟ್ ಮಾಡಿ ಮಂಗಳೂರಿನಿಂದ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತೆರಳುತ್ತಿದ್ದ ವ್ಯಕ್ತಿಯು ರಕ್ತ ವಾಂತಿ ಮಾಡಿ ಮೃತಪಟ್ಟಿದ್ದು, ಮೃತರನ್ನು ಕೇರಳದ ಕಣ್ಣೂರಿನ ತಲೆಚ್ಚೇರಿ ತಾಲೂಕಿನ ಪಿಲಾಕುಳ ಗ್ರಾಮ ನಿವಾಸಿ ಅಬ್ದುಲ್ ಅಝೀಝ್(53) ಎಂದು ಗುರುತಿಸಲಾಗಿದೆ.
ಅವರು ಮಂಗಳೂರಿನಿಂದ ಹೊಸದುರ್ಗಕ್ಕೆ ತೆರಳುವ ಬಸ್ಸಿನಲ್ಲಿ ಮೂಡಿಗೆರೆ ಟಿಕೆಟ್ ಮಾಡಿದ್ದರು. ಮಗನ ಮನೆಗೆ ತೆರಳುತ್ತಿದ್ದ ಅವರು ಬಸ್ಸು ಬ್ರಹ್ಮರಕೂಟ್ಲು ತಲುಪುತ್ತಿದ್ದಂತೆ ಹಿಂದಿನ ಸೀಟಿನಲ್ಲಿ ಕುಳಿತು ರಕ್ತ ವಾಂತಿ ಮಾಡುತ್ತಿದ್ದರು. ಬಳಿಕ ಅವರನ್ನು 108 ಆಂಬುಲೆನ್ಸ್ ಮೂಲಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.
ಫೆ. 27ರಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.