ಬಂಟ್ಬಾಳ: ಬಂಟ್ವಾಳ ಕಾಲೇಜು ರಸ್ತೆಯಲ್ಲಿರುವ ಶ್ರೀ ಧೂಮಾವತಿ ಬಂಟ ವೈದ್ಯನಾಥ ಅರಸು ಮಹಿಷಾಂತಾಯ ದೈವಸ್ಥಾನದ ನೇಮೋತ್ಸವದ ಗಗ್ಗರ ಸೇವೆ ಸುಮಾರು ಒಂದು ಗಂಟೆಗಳ ಕಾಲ ವಿಶೇಷ ದೊಂದಿ ಬೆಳಕಿನಲ್ಲಿ ನಡೆಯಿತು.
ಫೆ. 22 ರಿಂದ ಫೆ.24 ವರೆಗೆ ಇಲ್ಲಿನ ಮಹಿಷಾಂದಾಯ, ಜುಮಾಧಿ, ಬಂಟ, ವೈದ್ಯನಾಥ ದೈವಗಳ ನೇಮ ನಡೆಯಿತು.
ವಿಶೇಷವಾಗಿ ಫೆ.24 ರಂದು ರಾತ್ರಿ ಈ ಮೂರು ದೈವ ಗಳ ಗಗ್ಗರ ಸೇವೆ ದೊಂದಿ ಬೆಳಕಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ನಡೆಯಿತು. ಈ ಸಮಯದಲ್ಲಿ ಭಕ್ತರು ಭಯ-ಭಕ್ತಿಯಿಂದ ಅಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.