ಬಂಟ್ವಾಳ: ದಾಸಕೋಡಿ ಸಮೀಪದ ನೆಲ್ಲಿ ನಿವಾಸಿ ಮೋಹನ ಅವರು ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿದ್ದು, ಕಳೆದ 2 ತಿಂಗಳ ಹಿಂದೆ ರಕ್ತದೊತ್ತಡದ ಏರುಪೇರಿನ ಪರಿಣಾಮ ಬಿದ್ದು, ಇದೀಗ ಹಾಸಿಗೆ ಹಿಡಿದಿದ್ದಾರೆ. ಪತ್ನಿ ಹಾಗೂ 5 ತಿಂಗಳ ಪುಟ್ಟ ಕಂದಮ್ಮನ ಅವರ ಸಂಸಾರ ಇದೀಗ ದಿಕ್ಕೇ ತೋಚದೆ ಸಂಕಷ್ಟಕ್ಕೆ ಸಿಲುಕಿದೆ.
ಈಗಾಗಲೇ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 2.50 ಲಕ್ಷ ರೂ.ಗಳ ಚಿಕಿತ್ಸೆ ಪಡೆದಿದ್ದು, ಆದರೂ ನಡೆಯುವ ಪರಿಸ್ಥಿತಿಯಲ್ಲಿಲ್ಲ. ಇದೀಗ ಮತ್ತೆ ತೊಂದರೆ ಕಂಡು ಬAದಿದ್ದು, ಆಸ್ಪತ್ರೆ ಸೇರೆದ್ದಾರೆ. ಪತ್ನಿ ತನ್ನ 5 ತಿಂಗಳ ಮಗುವಿನ ಜತೆಗೆ ಪತಿಯ ದೈನಂದಿನ ಚಾಲರಿಯನ್ನೂ ಮಾಡಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ಬೀಡಿ ಸುತ್ತುತ್ತಿದ್ದ ಅವರಿಗೀಗ ಅದಕ್ಕೂ ಸಮಯವಿಲ್ಲ. ಆಸ್ಪತ್ರೆ, ಮನೆ ಎಂಬ ಓಡಾಟವೇ ಹೆಚ್ಚಿದೆ. ಹೀಗಾಗಿ ಈ ಕುಟುಂಬಕ್ಕೆ ಚಿಕಿತ್ಸೆ ವೆಚ್ಚದ ಜತೆಗೆ ಒಂದು ಹೊತ್ತಿನ ತುತ್ತಿಗೂ ಪರದಾಡಬೇಕಾದ ಸ್ಥಿತಿ ಇದೆ.
ಹೀಗಾಗಿ ಆ ಕುಟುಂಬವೀಗ ಸಹೃದಯ ದಾನಿಗಳ ನೆರವನ್ನು ಯಾಚಿಸುತ್ತಿದ್ದು, ದಾನಿಗಳು ಬಿ.ಸಿ.ರೋಡಿನಲ್ಲಿರುವ ಕರ್ಣಾಟಕ ಬ್ಯಾಂಕ್ ಬಂಟ್ವಾಳ-ಮೂಡ ಶಾಖೆಯಲ್ಲಿ ಮೋಹನ ಅವರ ಉಳಿತಾಯ ಖಾತೆ ಸಂಖ್ಯೆ 0712500101930401, ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ0000071ಕ್ಕೆ ನೆರವು ನೀಡುವಂತೆ ಮನವಿ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಗೆ ಮೊಬೆÊಲ್ ಸಂ: 9901372162ಗೆ ಸಂಪರ್ಕಿಸಬಹುದಾಗಿದೆ.