ಬಂಟ್ವಾಳ : ಸಂಚಾರಿ ಕಾನೂನು ಎಷ್ಟೇ ಬಲಯುತವಾಗಿದ್ದರೂ ಒಂದಿಲ್ಲೊಂದು ಕಾರಣಕ್ಕೆ ಅಪಘಾತಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ  ಬಂಟ್ವಾಳ ಪೊಲೀಸ್ ಸರ್ಕಲ್ ವ್ಯಾಪ್ತಿಯಲ್ಲಿ 2018ಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. 2018ರಲ್ಲಿ 259 ಹಾಗೂ 2019ರಲ್ಲಿ ಒಟ್ಟು 195 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಆದರೆ ಎರಡು ವರ್ಷಗಳಲ್ಲಿ  ನಡೆದಿರುವ ಅಪಘಾತಗಳಿಂದ ತಲಾ 39 ಮಂದಿ ಅಸುನೀಗಿದ್ದಾರೆ.

 

ಕಾನೂನು ಕಟ್ಟುನಿಟ್ಟು..

ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ವರ್ಷದಿಂದ ವರ್ಷಕ್ಕೆ ಅಪಘಾತಗಳು ಕಡಿಮೆಯಾಗಬೇಕು ಎಂಬ ದೃಷ್ಟಿಯಲ್ಲಿ ಕಾನೂನು ಕಟ್ಟುನಿಟ್ಟಿನ ಪಾಲನೆಗೆ ಮುಂದಾಗಿದ್ದರೂ  ವಾಹನ ಸವಾರರು/ಚಾಲಕರ ಅಜಾಗರೂಕತೆಯ ಚಲಾವಣೆ ಅಪಘಾತಗಳಿಗೆ ಕಾರಣವಾಗುತ್ತಿದೆ.

 

ಬಂಟ್ವಾಳಲ್ಲಿ ಸಂಚಾರಿ ಪೊಲೀಸ್ ಠಾಣೆ ಅಸ್ತಿತ್ವಕ್ಕೆ ಬಂದ ಬಳಿಕ ಬಂಟ್ವಾಳ ಸರ್ಕಲ್ ವ್ಯಾಪ್ತಿಯ ನಾಲ್ಕು ಪೊಲೀಸ್ ಠಾಣೆಯ ಪೈಕಿ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಚಾರ ಅಪಘಾತ ಪ್ರಕರಣಗಳನ್ನು ಬಂಟ್ವಾಳ ಸಂಚಾರಿ ಪೊಲೀಸರು ನೋಡಿಕೊಂಡರೆ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಪ್ರಕರಣಗಳನ್ನು ಅವರೇ ನೋಡಿಕೊಳ್ಳುತ್ತಾರೆ.

 

ಪ್ರಕರಣಗಳ ಅಂಕಿಅಂಶ..

 

2018ರಲ್ಲಿ ಬಂಟ್ವಾಳ ಸರ್ಕಲ್ ವ್ಯಾಪ್ತಿಯಲ್ಲಿ ಒಟ್ಟು 259 ಅಪಘಾತ ಪ್ರಕರಣಗಳಲ್ಲಿ 332 ಮಂದಿ ಬಾಧಿತರಾಗಿದ್ದಾರೆ. ಇದರಲ್ಲಿ 37 ಗಂಭೀರ ಅಪಘಾತ ಪ್ರಕರಣಗಳಲ್ಲಿ 39 ಮಂದಿ ಮೃತಪಟ್ಟಿದ್ದು, 7 ತೀವ್ರ ಪ್ರಕರಣದಲ್ಲಿ 15 ಮಂದಿಗೆ ತೀವ್ರಕರ ಗಾಯವಾಗಿತ್ತು. 193 ಸಣ್ಣ ಪ್ರಕರಣದಲ್ಲಿ 278 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದರು. 22 ಗಂಭೀರವಲ್ಲದ ಅಪಘಾತಗಳಲ್ಲಿ ಯಾರೂ ಕೂಡ ಗಾಯಗೊಂಡಿರಲಿಲ್ಲ.

2019ರಲ್ಲಿ ಒಟ್ಟು 195 ಅಪಘಾತ ಪ್ರಕರಣಗಳಲ್ಲಿ 310 ಮಂದಿ ಬಾಧಿತರಾಗಿದ್ದಾರೆ. ಇದರಲ್ಲಿ 27 ಗಂಭೀರ ಅಪಘಾತ ಪ್ರಕರಣಗಳಲ್ಲಿ 39 ಮಂದಿ ಮೃತಪಟ್ಟಿದ್ದು, 13 ತೀವ್ರ ಪ್ರಕರಣದಲ್ಲಿ 22 ಮಂದಿಗೆ ತೀವ್ರತರದ ಗಾಯವಾಗಿತ್ತು. 140 ಸಣ್ಣ ಪ್ರಕರಣದಲ್ಲಿ 249 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದರು. 15 ಗಂಭೀರವಲ್ಲದ ಅಪಘಾತಗಳಲ್ಲಿ ಯಾರೂ ಕೂಡ ಗಾಯಗೊಂಡಿರಲಿಲ್ಲ.

 

2108ರ ಪ್ರಕರಣಗಳು

ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಒಟ್ಟು 189 ಪ್ರಕರಣಗಳು ದಾಖಲಾಗಿದ್ದು, ಒಟ್ಟು 233 ಮಂದಿ ಇದರಿಂದ ಬಾಧಿತರಾಗಿದ್ದರು. ಇದರಲ್ಲಿ 26 ಗಂಭೀರ ಅಪಘಾತ ಪ್ರಕರಣಗಳಲ್ಲಿ 28 ಮಂದಿ ಮೃತಪಟ್ಟಿದ್ದು, 3 ತೀವ್ರತರದ ಪ್ರಕರಣದಲ್ಲಿ 4 ಮಂದಿಗೆ ತೀವ್ರಕರ ಗಾಯವಾಗಿತ್ತು. 145 ಸಣ್ಣ ಪ್ರಕರಣದಲ್ಲಿ 201 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದರು. 15 ಗಂಭೀರವಲ್ಲದ ಅಪಘಾತಗಳಲ್ಲಿ ಯಾರೂ ಕೂಡ ಗಾಯಗೊಂಡಿರಲಿಲ್ಲ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018ರಲ್ಲಿ ಒಟ್ಟು 70 ಪ್ರಕರಣಗಳು ದಾಖಲಾಗಿದ್ದು, ಒಟ್ಟು 99 ಮಂದಿ ಇದರಿಂದ ಬಾಧಿತರಾಗಿದ್ದರು. ಇದರಲ್ಲಿ 11 ಗಂಭೀರ ಅಪಘಾತ ಪ್ರಕರಣಗಳಲ್ಲಿ 11 ಮಂದಿ ಮೃತಪಟ್ಟಿದ್ದು, 4 ತೀವ್ರ ಪ್ರಕರಣದಲ್ಲಿ 11 ಮಂದಿಗೆ ತೀವ್ರತರದ ಗಾಯವಾಗಿತ್ತು. 48 ಸಣ್ಣ ಪ್ರಕರಣದಲ್ಲಿ 277 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದರು. 7 ಗಂಭೀರವಲ್ಲದ ಅಪಘಾತಗಳಲ್ಲಿ ಯಾರೂ ಕೂಡ ಗಾಯಗೊಂಡಿರಲಿಲ್ಲ.

 

2019ರ ಪ್ರಕರಣಗಳು 

ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ಒಟ್ಟು 140 ಪ್ರಕರಣಗಳು ದಾಖಲಾಗಿದ್ದು, ಒಟ್ಟು 240 ಮಂದಿ ಇದರಿಂದ ಬಾಧಿತರಾಗಿದ್ದರು. ಇದರಲ್ಲಿ 20 ಗಂಭೀರ ಅಪಘಾತ ಪ್ರಕರಣಗಳಲ್ಲಿ 29 ಮಂದಿ ಮೃತಪಟ್ಟಿದ್ದು, 4 ತೀವ್ರ ಪ್ರಕರಣದಲ್ಲಿ 5 ಮಂದಿಗೆ ತೀವ್ರಕರ ಗಾಯವಾಗಿತ್ತು. 108 ಸಣ್ಣ ಪ್ರಕರಣದಲ್ಲಿ 206 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದರು. 8 ಗಂಭೀರವಲ್ಲದ ಅಪಘಾತಗಳಲ್ಲಿ ಯಾರೂ ಕೂಡ ಗಾಯಗೊಂಡಿರಲಿಲ್ಲ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ಒಟ್ಟು 55 ಪ್ರಕರಣಗಳು ದಾಖಲಾಗಿದ್ದು, ಒಟ್ಟು 70 ಮಂದಿ ಇದರಿಂದ ಬಾಧಿತರಾಗಿದ್ದರು. ಇದರಲ್ಲಿ 7 ಗಂಭೀರ ಅಪಘಾತ ಪ್ರಕರಣಗಳಲ್ಲಿ 10 ಮಂದಿ ಮೃತಪಟ್ಟಿದ್ದು, 9 ತೀವ್ರ ಪ್ರಕರಣದಲ್ಲಿ 17 ಮಂದಿಗೆ ತೀವ್ರಕರ ಗಾಯವಾಗಿತ್ತು. 32 ಸಣ್ಣ ಪ್ರಕರಣದಲ್ಲಿ 43 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದರು. 7 ಗಂಭೀರವಲ್ಲದ ಅಪಘಾತಗಳಲ್ಲಿ ಯಾರೂ ಕೂಡ ಗಾಯಗೊಂಡಿರಲಿಲ್ಲ.

 

ಜಾಗೃತಿ ಕಾರ್ಯಕ್ರಮಗಳು

 

ಸಂಚಾರ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಸಂಚಾರ ಸಪ್ತಾಹ, ಅಪಘಾತ ತಡೆ ಮಾಸಾಚರಣೆಯಂತಹಾ ಜಾಗೃತಿ ಕಾರ್ಯಕ್ರಮಗಳನ್ನು  ನಡೆಸುತ್ತಿದೆ. ಹೀಗಿದ್ದರೂ ಗಮನೀಯ ಪ್ರಮಾಣದಲ್ಲಿ ಅಪಘಾತ ನಿಯಂತ್ರಣವಾಗದಿರುವುದು ಖೇದಕರ.

………..

 

ಸಂಚಾರ ನಿಯಮಗಳ ಪಾಲನೆ ಅಗತ್ಯ

ವಾಹನ ಚಾಲಕರು/ಸವಾರರು ಸಂಚಾರ ನಿಯಮಗಳ ಕುರಿತು ಹೆಚ್ಚಿನ ಗಮನಹರಿಸಿದರೆ, ಅಪಘಾತಗಳ ಸಂಖ್ಯೆ ಕಡಿಮೆಯಾಗಲು ಸಹಕಾರಿಯಾಗುತ್ತದೆ. ಜನರು ಪೊಲೀಸ್ ಇಲಾಖೆಯ ಜತೆಗೆ ಸಹಕರಿಸುವುದು ಅತಿ ಅಗತ್ಯ.

ವೆಲೆಂಟೈನ್ ಡಿಸೋಜಾ

ಡಿವೈಎಸ್‌ಪಿ, ಬಂಟ್ವಾಳ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here