ಬಂಟ್ವಾಳ: ಕೆದಿಲ ಶಾಲೆಯ ಬೇಡಿಕೆಯಾದ ಪೌಢಶಾಲೆಯನ್ನು ಮಂಜೂರುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ಶನಿವಾರ ಕೆದಿಲ(ಗಡಿಯಾರ) ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಗಳಲ್ಲೂ ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ ನೀಡುತ್ತಿದ್ದು, ಇದಕ್ಕೆ ಕೆದಿಲ ಶಾಲೆಯೇ ಸ್ಪಷ್ಟ ನಿದರ್ಶನ ಎಂದರು.
ಕೆದಿಲ ಗ್ರಾ.ಪಂ ಅಧ್ಯಕ್ಷ ಅಣ್ಣಪ್ಪ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ನೂತನ ಸಭಾಭವನ ಉದ್ಘಾಟಿಸಿದರು. ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ನವೀಕೃತ ಸಿ.ಆರ್.ಸಿ.ಕಟ್ಟಡ ಉದ್ಘಾಟಿಸಿದರು. ತಾ.ಪಂ.ಸದಸ್ಯ ಹಾಜಿ ಆದಂ ಕುಂಞಿಯವರು ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆದಿಲ ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ಉಮರಬ್ಬ, ಬೀಪಾತುಮ್ಮಾ,ಫೌಝಿಯಾ, ಕೆದಿಲ ಕ್ಲಸ್ಟರ್ ಸಿ.ಆರ್.ಪಿ. ಸುಧಾಕರ ಭಟ್, ಪ್ರಮುಖರಾದ ಪಿ.ಕೆ.ಹಾಜಿ ಅಬ್ಬು, ಅಬೂಬಕರ್ ಸಿದ್ದೀಕ್, ಬಿ.ಪದ್ಮನಾಭ ಭಟ್ಟ ಪೆರ್ನಾಜೆ, ಡಾ.ಶ್ರೀನಾಥ ಆಳ್ವ ಪೆರಾಜೆಗುತ್ತು, ಡಾ.ಮನೋಹರ ರೈ, ಜಿ.ಮಹಮ್ಮದ್, ಎನ್.ರಾಮಚಂದ್ರ ಮೂಲ್ಯ, ಸಂಜೀವ ನಾಯ್ಕ್,ಮಹಮ್ಮದ್ ಪಾಟ್ರಕೋಡಿ, ಕಟ್ಟಡ ಗುತ್ತಿಗೆದಾರ ಗಣೇಶ್ ಕುಳ, ನಿವೃತ್ತ ಶಿಕ್ಷಕಿ ಸೀತಮ್ಮ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತಿ ಹೊಂದಲಿರುವ ಸಹಶಿಕ್ಷಕ ರಾಜೀವ್ ಶೆಟ್ಟಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ಗಿರಿಯಪ್ಪ ಗೌಡ ಅಭಿನಂದನಾ ಮಾತುಗಳನ್ನಾಡಿದರು.
ಶಾಲೆಯ ಹಳೆವಿದ್ಯಾರ್ಥಿಗಳಾದ ಅಂತರಾಷ್ಟ್ರೀಯ ಚೆಸ್ ಕ್ರೀಡಾ ಪಟು ಕು.ಯಶಸ್ವಿ, ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕು.ದೀಕ್ಷಾ, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ದೀಕ್ಷಿತ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಸೌಮಿತಾ ಸನ್ಮಾನಿತರನ್ನು ಪರಿಚಯಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆ.ಶಂಕರ್ ಭಟ್ ಚಟುವಟಿಕೆಗಳ ವರದಿ ಮಂಡಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಇಬ್ರಾಹಿಂ ವೇದಿಕೆಯಲ್ಲಿದ್ದರು. ಸಹಶಿಕ್ಷಕ ನಿತ್ಯಾನಂದ ಎನ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸುಚೇತ ವಂದಿಸಿದರು.
ಶಿಕ್ಷಕ ಸದಾನಂದ ಕಾರ್ಯಕ್ರಮ ನಿರ್ವಹಿಸಿದರು.