


ಬಂಟ್ವಾಳ: ಬಂಟ್ವಾಳ ಪೇಟೆಯ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಅಭಿಪ್ರಾಯ ಸಂಗ್ರಹ, ಸೂಕ್ತ ಸಲಹೆ ಪಡೆಯಲು ಬಂಟ್ವಾಳ ಗ್ರಾಮಾಂತರ ಪೋಲೀಸ್ ಸ್ಟೇಷನ್ನಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿಸೋಜ ನೇತ್ರತೃದಲ್ಲಿ ಸಾರ್ವಜನಿಕ ಹಾಗೂ ವರ್ತಕರ ವಿಶೇಷ ಸಭೆ ಗುರುವಾರ ನಡೆಯಿತು.
ನಾಳೆ ಫೆ. 21 ರಿಂದ ಲೇ ಟ್ರಾಫಿಕ್ ಪರಿಹಾರಕ್ಕೆ ಪೋಲೀಸರು ಕಾರ್ಯಪ್ರವೃತ್ತರಾಗುತ್ತಾರೆ ಸಾರ್ವಜನಿಕರು ಹಾಗೂ ವರ್ತಕರು ಸಹಕಾರ ನೀಡುವಂತೆ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ತಿಳಿಸಿದರು.
ಒಂದು ವಾರಗಳ ಕಾಲ ಪೋಲೀಸರು ವಾಹನ ಪಾರ್ಕಿಂಗ್ ಮತ್ತು ಸಂಚಾರಕ್ಕೆ ಅಡಚಣೆಯಾಗದ ರೀತಿಯಲ್ಲಿ ಸಹಕಾರ ನೀಡಲು ವಾಹನ ಸವಾರರಿಗೆ ಕಾಲಾವಕಾಶ ನೀಡುತ್ತಾರೆ. ಅಬಳಿಕ ಯಾವುದೇ ಮುಲಾಜಿಲ್ಲದೆ ಟ್ರಾಫಿಕ್ ಪೋಲಿಸರು ದಂಡ ಹಾಕುತ್ತಾರೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ವರ್ತಕರು ಪೇಟೆಯಲ್ಲಿ ವಾಹನ ಪಾರ್ಕಿಂಗ್ ಮಾಡುವವರಿಗೆ ಮಾಹಿತಿ ನೀಡುವಂತೆಯೂ ತಿಳಿಸಲಾಯಿತು.
ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಪ್ರಥಮವಾಗಿ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಹಾಗಾದರೆ ಮಾತ್ರ ಸಮಸ್ಯೆ ಪರಿಹಾರವಾಗಬಹುದು ಎಂದು ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ಅಭಿಪ್ರಾಯ ಮಂಡಿಸಿದರು. ಬಳಿಕ ಇತರ ವರ್ತಕರ ಅಭಿಪ್ರಾಯ ಪಡೆದು, ಬಡ್ಡಕಟ್ಟೆ ನಿತ್ಯಾನಂದ ಮಂದಿರದಿಂದ ಸರಕಾರಿ ಆಸ್ಪತ್ರೆಯ ಬಳಿ ನೆರೆ ವಿಮೋಚನಾ ರಸ್ತೆಯವರೆಗೆ ಮುಖ್ಯರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡದಂತೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು.
ಬಂಟ್ವಾಳ ತ್ಯಾಗರಾಜ ರಸ್ತೆಯಲ್ಲಿ ಮನೆಗಳಿರುವುದರಿಂದ ಮನೆಯವರಿಗೆ ಸಮಸ್ಯೆಯಾಗದಂತೆ ಒಂದೇ ಬದಿಯಲ್ಲಿ ವಾಹನ ನಿಲ್ಲಿಸುವಂತೆ ಸಭೆಯಲ್ಲಿ ತಿಳಿಸಿದಾಗ ಈ ಬಗ್ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಒಂದು ವೇಳೆ ನಿಲ್ಲಿಸುದಾದರೂ ದ್ವಿಚಕ್ರ ವಾಹನಗಳಿಗೆ ಅವಕಾಶ ನೀಡುವ ಬಗ್ಗೆ ಅಧಿಕಾರಿಗಳು ಸ್ಥಳ ವೀಕ್ಷಣೆ ನಡೆಸಿದಾಗ ಬಳಿಕ ಅವಕಾಶ ನೀಡುವಂತೆ ತಿಳಿಸಲಾಯಿತು.
ಮುಖ್ಯ ರಸ್ತೆಯಲ್ಲಿ ರಿಕ್ಷಾ ಪಾರ್ಕ್ಗೆ ಅವಕಾಶ ನೀಡಬಾರದು, ಭಾಮಿ ಜಂಕ್ಷನ್ನಲ್ಲಿ ಅಥವಾ ಕೊಟ್ರಮನ ಗಂಡಿಯಲ್ಲಿ ಮೊದಲು ರಿಕ್ಷಾ ನಿಲುಗಡೆಗೆ ಅವಕಾಶ ನೀಡಲಾಗಿತ್ತು, ಈಗಲೂ ಅಲ್ಲಿ ಅವಕಾಶ ನೀಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ಕೇಳಿ ಬಂದವು. ಮೂರು ಮಾರ್ಗದಲ್ಲಿ ಯಾವುದೇ ವಾಹನಗಳು ನಿಲ್ಲಬಾರದು ಎಂದು ತೀರ್ಮಾನಿಸಲಾಯಿತು.
ಬಂಟ್ವಾಳ ಜಂಕ್ಷನ್ನಲ್ಲಿ ಅಂಗಡಿಗಳ ಬರುವ ಸಾಮಾಗ್ರಿಗಳ ಲಾರಿಗಳ ಲೋಡ್/ಆನ್ಲೋಡ್ ಮಾಡಿಕೊಳ್ಳಲು ಸಮಯ ನಿಗದಿ ಮಾಡುವಂತೆ ಸಭೆಯಲ್ಲಿ ತಿಳಿಸಲಾಯಿತು. ಬಳಿಕ ಸಭೆಯಲ್ಲಿ ಬೆಳಿಗ್ಗೆ ೮ ಗಂಟೆಯವರೆಗೆ ಮಧ್ಯಾಹ್ನ ೧ರಿಂದ ೩ ಸಂಜೆ ೭ ಬಳಿಕ ಲೋಡ್/ಅನ್ಲೋಡ್ ಮಾಡುವಂತೆ ಸಮಯ ನಿಗದಿ ಮಾಡಲಾಯಿತು.
ಅಂಗಡಿಗಳ ತಗಡು ಸೀಟುಗಳು ಅರ್ಧ ರಸ್ತೆಯನ್ನು ಅಕ್ರಮಿಸಿಕೊಂಡಿದೆ. ವ್ಯಾಪಾರ ವಹಿವಾಟುಗಳು ಅಂಗಡಿಯಿಂದ ಮಾರ್ಗದ ಮಧ್ಯೆವರೆಗೆ ಬಂದಿದೆ. ಪುರಸಭೆಯವರು ಈ ಬಗ್ಗೆ ಗಮನಹರಿಸಿ ರಸ್ತೆ ಬದಿಯ ವ್ಯಾಪಾರ ಗಳಿಗೆ ಕ್ರಮಕೈಗೊಳ್ಳಿ. ಬಂಟ್ವಾಳ ಮೂರು ಪಾಯಿಂಟ್ಗಳಲ್ಲಿ ಟ್ರಾಫಿಕ್ ಪೋಲೀಸರ ನಿಯೋಜನೆ ಭರವಸೆ ನೀಡಿದರು. ಅಂಗಡಿ ಮಾಲಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸದೆ, ಸಹಕಾರ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಽಕಾರಿಗಳ ಸಭೆ ನಡೆಸಲು ಸಭೆಯಲ್ಲಿ ಒತ್ತಾಯಿಸಲಾಯಿತು. ಪ್ರೊಬೆಷನರಿ ಐಪಿಎಸ್ ಅಽಕಾರಿ ರಂಜಿತ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ನಗರ ಠಾಣಾ ಎಸ್. ಐ.ಅವಿನಾಶ್, ಟ್ರಾಫಿಕ್ ಎಸ್.ಐ.ರಾಮ ನಾಯ್ಕ್ ಸಭೆಯಲ್ಲಿ ಸಲಹೆ ನೀಡಿದರು.


