ಬಂಟ್ವಾಳ: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ದೇಯಿ ಬದ್ಯೆತಿ ಕೋಟಿ-ಚೆನ್ನಯರ ಮೂಲ ಸ್ಥಾನದಲ್ಲಿ ಜರಗಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಕಕ್ಯಪದವು ಶ್ರೀ ಕಡಂಬಳಿತ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬದರ್ಕಳ ಗರೊಡಿಯಲ್ಲಿ ಫೆ.9ರಂದು ಜರಗಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪಿತಾಂಬರ ಹೇರಾಜೆ, ಉಪಾಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ತಾಲೂಕಿನ ಅಧ್ಯಕ್ಷ ಪ್ರೇಮನಾಥ್, ಪ್ರಚಾರ ಸಮಿತಿಯ ಬಂಟ್ವಾಳ ತಾಲೂಕಿನ ಸಂಚಾಲಕ ಜಗದೀಶ್ ಕೊಲ, ಪುತ್ತೂರು ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ದಯಾನಂದ ಕರ್ಕೇರ, ಪ್ರಧಾನ ಸಂಚಾಲಕ ರವಿ ಕಕ್ಯಪದವು, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಮಾಡಪಲ್ಕೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ್ ಪೂಜಾರಿ, ಉಳಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರಾಜೇಂದ್ರ ತಿಮರಡ್ಡ, ಸ್ವಯಂ ಸೇವಾ ಸಮಿತಿಯ ಪ್ರಧಾನ ಸಂಚಾಲಕ ನಾರಾಯಣ ಪೂಜಾರಿ ಮಚ್ಚಿನ, ಮಣಿನಾಲ್ಕೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಮಜಲು , ಉಳಿ ಗ್ರಾ.ಪಂ.ಸದಸ್ಯರಾದ ಚಿದಾನಂದ ರೈ, ಚೇತನ್ ಹೂರ್ದೊಟ್ಟು, ಸದಾನಂದ ಪೂಜಾರಿ ಕಟ್ಟದಪಡ್ಪು, ಕಕ್ಯಪದವು ಶ್ರೀ ಬ್ರಹ್ಮಬದರ್ಕಳ ಗರೊಡಿಯ ಉತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಉಳಿ ಯುವಕ ಮಂಡಲದ ಅಧ್ಯಕ್ಷ ಸನತ್ ಕಕ್ಯಪದವು. ಡಾ. ದಿನೇಶ್ ಬಂಗೇರ, ಹೊರೆ ಕಾಣಿಕೆ ಸಮಿತಿ ಸಂಚಾಲಕ ಮಂಜುನಾಥ ಸಾಲ್ಯಾನ್, ಅಣ್ಣಿ ಪೂಜಾರಿ ಚಿಮುಳ್ಳು. ವಕೀಲ ರಂಜಿತ್ ಮೈರ , ಪ್ರಶಾಂತ್ ಮೈರ, ಯತೀಶ್, ಪುನೀತ್, ಯಶವಂತ್ ಗೌಡ ಮತ್ತಿತರರು ಭಾಗವಹಿಸಿದ್ದರು.