


ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿನ ಅನೇಕ ಮನೆಗಳಿಗೆ ಕುಡಿಯುವ ನೀರು ಸರಬರಾಜು ಅಗುತ್ತಿಲ್ಲ ಎಂಬ ವರದಿಯನ್ನು ಮಾಡಿದ್ದಕ್ಕೆ ಪತ್ರಕರ್ತನಿಗೆ ಪುರಸಭಾ ಇಂಜಿನಿಯರ್ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಆಗದೆ ಅಲ್ಲಿನ ಮನೆಯವರಿಗೆ ತೊಂದರೆ ಅಗುತ್ತಿತ್ತು. ಈ ಬಗ್ಗೆ ಪುರಸಭೆಗೆ ದೂರು ನೀಡಲು ಇಲಾಖೆಗೆ ಹೋಗಿದ್ದ ಮಹಿಳೆಯ ದೂರು ಸ್ವೀಕರಿಸಿದ ಅಧಿಕಾರಿಗಳು ದರ್ಪದ ಮಾತು ಆಡಿದ್ದಾರೆ ಎಂದು ಅವರು ಮಾಧ್ಯಮದವರ ಜೊತೆ ಹೇಳಿದ್ದಾರೆ ಎಂದು ವರದಿ ಬಿತ್ತರಿಸಲಾಗಿತ್ತು.
ಆದರೆ ಈ ವರದಿ ನೋಡಿದ ಅಲ್ಲಿನ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ವರದಿಗಾರನಿಗೆ ಪೋನ್ ಮಾಡಿ ಮಹಿಳೆ ಯಾರು ಅವರಿಗೆ ನಾವು ಯಾರು ಮಾತನಾಡಿಲ್ಲ, ಅವರು ಯಾವ ದೇವಸ್ಥಾನಕ್ಕೆ ಬರುತ್ತಾರೆ ಎಂದು ಕರೆದಿದ್ದಾರೆ, ಅಲ್ಲದೆ ಕುಡಿಯುವ ನೀರು ಸರಬರಾಜು ಅಗದಿದ್ದರೆ ನಿನಗೆ ಏನು, ನಿನೇನು ಜನಪ್ರತಿನಿಧಿಯ, ನಿನ್ನ ಮೇಲೆ ಕೇಸು ಮಾಡುತ್ತೇನೆ, ಈ ಹಿಂದೆಯೂ ಪತ್ರಕರ್ತರ ಮೇಲೆ ಮಾಡಿದ್ದೇನೆ, ಇನ್ನು ಮುಂದೆ ವರದಿ ಮಾಡಿದರೆ ಜಾಗೃತೆ ಎಂದು ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಪಿ.ಡಿ.ಸಂತೋಷ್ ಅವರಲ್ಲಿ ಮೌಖಿಕವಾಗಿ ತಿಳಿಸಲಾಗಿದ್ದು ಅವರು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.


