ಬಂಟ್ವಾಳ: 21ನೇ ಶತಮಾನದ ವೈಜ್ಞಾನಿಕ ಯುಗದಲ್ಲಿ ಹಲವಾರು ಮಂದಿಯಲ್ಲಿ ದೇವರು ಇದ್ದಾರ ಎಂಬ ಪ್ರಶ್ನೆ. ಮಕ್ಕಳು ನಮ್ಮಲ್ಲಿ ದೇವರು ಇದ್ದಾರ ಎಂದು ಕೇಳಿದಾಗ ದೇವಸ್ಥಾನ. ದೇವರ ಪೋಟೋಗಳನ್ನು ತೋರಿಸಿ ದೇವರು ಇದ್ದಾರೆ ಎಂದು ಹೇಳಿ ಬಿಡುತ್ತೇವೆ. ಆದರೆ ಮಗುವಿಗೆ ಆ ಉತ್ತರ ಸಮರ್ಥವಾಗುವುದಿಲ್ಲ. ಹಾಗಾಗಿ ನಾವು ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹಿಂದು ಜಾಗರಣ ವೇದಿಕೆ, ಪ್ರಾಂತ ಕಾರ್ಯದರ್ಶಿ ಕರ್ನಾಟಕ ದಕ್ಷಿಣ ರಾಧಾಕೃಷ್ಣ ಅಡ್ಯಾಂತಯ ಹೇಳಿದರು.
ಅವರು ತುಳಿಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ 17ನೇ ವರ್ಷದ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೇವರ ಎಲ್ಲಿದ್ದಾರೆ ಎಂದರೆ, ಕೂಲಿ ಕೆಲಸ ಮಾಡುವ ಬಡವನಲ್ಲಿ, ಮಗುವಿನ ನಗುವಿನಲ್ಲಿ, ಭಕ್ತಿ ಭಜನೆಯಲ್ಲಿ ದೇವರು ಇದ್ದರೆ. ದೇವರನ್ನು ಕಾಣಬೇಕಾದರೆ ನಂಬಿಕೆ, ಶ್ರಧ್ಧೆ, ಪ್ರಯತ್ನ ಮತ್ತು ತಾಳ್ಮೇ ಇರಬೇಕು. ಆಗ ಮಾತ್ರ ವಿಶ್ವವ್ಯಾಪಿಯಾಗಿ ಇರುವ ದೇವರನ್ನು ಕಾಣಬಹುದು. ದೇವರನ್ನು ನಾವು ಬೇರೆ ಬೇರೆ ರೂಪದಲ್ಲಿ ಆರಾಧಿಸಲು ಆರಂಭಿಸಿದೆವು. ಹಲವು ನಾಮಗಳಿಂದ ಕರೆದು ದೇವರನ್ನು ಕರೆದವು. ನಂಬಿಕೆಯ ಆಧಾರದ ಮೇಲೆ ನಾವು ಕಲ್ಲು, ಮರ, ಭೂಮಿ ಹೀಗೆ ಎಲ್ಲವನ್ನು ಪ್ರಾರ್ಥಿಸಿಕೊಂಡು ಬಂದಿದ್ದಾರೆ. ದೇವರು ಎಲ್ಲಾ ಕಡೆಯಲ್ಲಿಯೂ ಇದ್ದಾನೆ. ಭಜನೆಯನ್ನು ಮುಖಂತರ ದೇವರನ್ನು ಸ್ಮರಿಸಬೇಕು ದೇವರು ಎಲ್ಲಿದ್ದಾರೆ ಎಂಬ ಪ್ರಶ್ನೆಗೂ ಉತ್ತರ ಇದೆ, ಭಜನೆಯ ಯಾಕೆ ಮಾಡಬೆಕು ಎಂಬ ಎರಡು ಪ್ರಶ್ನೆಗೆ ಉತ್ತರ ನಮ್ಮಲ್ಲಿ ಇದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅತಿಥಿಯಾಗಿ ಶ್ರೀ ಲಕ್ಷ್ಮೀ ಪಂಪ್ಸ್ ಮತ್ತು ಹಾರ್ಡ್‌ವೇರ್ ಇದರ ಮಾಲಕ ಶಂಕರ ಆಚಾರ್ಯ ಮಾತನಾಡಿ, ಮೂವತ್ತು ವರ್ಷಗಳ ಹಿಂದೆ ಭಜನಾ ಮಂದಿರಕ್ಕೆ ತನ್ನ ತಂದೆ ಭಜನೆಗೆ ಕರೆದುಕೊಂಡು ಬಂದಿದ್ದರು. ಆಗ ನಾನು ಇಲ್ಲಿ ಒಂದು ಗಂಟೆಯ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಗೊಂಡದದ್ದು ಹೆಮ್ಮಯ ವಿಚಾರ. ಭಜನೆಯ ಮುಖಾಂತರ ಏನನ್ನು ಬೇಕಾದರೂ ಸಾಧಿಸಬಹುದು ಈ ಮಂದಿರ ಎಲ್ಲರೂ ಸಾಕ್ಷಿಯಾಗಿದ್ದಾರೆ. ಭಜನೆ ಎಂದರೆ ಭಕ್ತಿ. ನಾವು ಪ್ರತಿಯೊಬ್ಬರು ದೇವರನ್ನು ಭಜನಾ ಮೂಲಕ ಸ್ಮರಿಸುವುಸು ಮುಖ್ಯ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಇತರರಿಗೆ ಸಹಾಯವನ್ನು ಮಾಡುವ ಕಾರ್ಯದಲ್ಲಿ ಪಾಲ್ಗೊಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಮಹಾಬಲ ರೈ ಹೊಸಮನೆ ಬೊಳಂತೂರು, ಸಿವಿಲ್ ಇಂಜಿನಿಯರ್ ರಾಮ್ ಪ್ರಸಾದ್ ಕೊಂಬಿಲ ಮತ್ತಿತ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ಸಿದ್ದೀವಿನಾಯಕ ಭಜನಾ ಮಂಡಳಿಯ ಸದಸ್ಯ ಮುತ್ತಪ್ಪ ಮೂಲ್ಯ ಪ್ರಸ್ತಾವಿಸಿ, ಸ್ವಾಗತಿಸಿದರು. ಉಮೇಶ್ ಕೊಕ್ಕಪುಣಿ ವಂದಿಸಿದರು. ಸ್ವಾತಿ ಪ್ರಾರ್ಥಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here