Friday, October 27, 2023

’ಹೃದಯ ಶ್ರೀಮಂತಿಕೆ ಎಲ್ಲಕ್ಕಿಂತ ಮಿಗಿಲಾದುದು’-ಕಣಿಯೂರುಶ್ರೀ

Must read

ವಿಟ್ಲ: ಪರಿಶುದ್ಧ ಶ್ರದ್ಧಾ ಭಕ್ತಿಯ ಅರ್ಪಣೆಯಾಗದೇ ದೇವರ ಅನುಗ್ರಹ ಅಸಾಧ್ಯ. ಹೃದಯ ಶ್ರೀಮಂತಿಕೆ ಜಗತ್ತಿನ ಎಲ್ಲಾ ಐಶ್ವರ್ಯಕ್ಕಿಂತ ಮಿಗಿಲಾದುದು, ಬಾಕಿಲಗುತ್ತಿನಲ್ಲಿ ಹತ್ತು ಮನಸ್ಸುಗಳು ಒಂದೇ ಮನಸ್ಸಿನಿಂದ ಸಂಘಟಿತರಾಗಿ ಒಂದು ಮಹಾ ಕಾರ್ಯಸಾಧನೆಯಾಗಿದೆ. ಭವಿಷ್ಯದಲ್ಲಿ ಬಾಕಿಲಗುತ್ತು ಕ್ಷೇತ್ರ ಭವಿಷ್ಯದಲ್ಲಿ ಸರ್ವಸಿರಿಯೊಂದಿಗೆ ಸಮೃದ್ಧಿಯಾಗಿ ಬೆಳಗುವುದರಲ್ಲಿ ಸಂದೇಹವಿಲ್ಲ ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಹೇಳಿದರು.
ಅವರು ಬಾಕಿಲಗುತ್ತು ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ, ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಬೆರ್ಮೆರ್ ಬೈದೇರುಗಳು ಹಾಗೂ ಇತರ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೈವಗಳಿಗೆ ನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಜಯಾನಂದ ಪೂಜಾರಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ಬಾಕಿಲಗುತ್ತು ವಿಶೇಷ ಶಕ್ತಿಯುಳ್ಳ ಕ್ಷೇತ್ರವಾಗಿ ಬೆಳಗಿದೆ. ಕ್ಷೇತ್ರದ ದೈವ ಶಕ್ತಿಯ ಪ್ರಭಾವದಿಂದ ನಾವು ಧನಾತ್ಮಕ ವಿಚಾರಗಳೊಂದಿಗೆ ಬೆಳೆಯುವಂತಹ ಸುಯೋಗ ಕೂಡಿ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಬಾಕಿಲಗುತ್ತು ಆಡಳಿತ ಟ್ರಸ್ಟ್ ಅಧ್ಯಕ್ಷ ವಸಂತ ಪೂಜಾರಿ ಅಧ್ಯಕ್ಷತೆ ಯನ್ನು ವಹಿಸಿದ್ದರು. ಕೊಬ್ರಿಮಠ ತಂತ್ರಿ ಗೋಪಾಲಕೃಷ್ಣ ಬನ್ನಿಂತಾಯ, ಮಾರ್ಗದರ್ಶಕರಾದ ಸುದರ್ಶನ ಭಟ್, ಅವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶ ಸಮಿತಿ ಸಂಚಾಲಕ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಸನತ್ ಕುಮಾರ್ ರೈ, ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿತಾಂಬರ ಹೇರಾಜೆ, ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್, ಮಾಣಿ ಉಳ್ಳಾಲ್ತಿ ಕ್ಷೇತ್ರದ ಮೊಕ್ತೇಸರರಾದ ಸಚಿನ್ ರೈ, ಮಾಣಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್, ಉದ್ಯಮಿಗಳಾದ ಸಂತೋಷ್ ಕುಮಾರ್ ಕೊಟ್ಟಿಂಜ, ಅಜಯ್ ಬಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಜಗದೀಶ್ ಪೂಜಾರಿ, ಕಲ್ಲಡ್ಕ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಬಾಕಿಲಗುತ್ತು, ಕೋಶಾಧಿಕಾರಿ ಹರೀಶ್ ಸಾಲ್ಯಾನ್ ಬಾಕಿಲಗುತ್ತು, ಜತೆ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಟ್ರಸ್ಟಿಗಳಾದ ನಾರಾಯಣ ಪೂಜಾರಿ, ವಿಶ್ವನಾಥ ಕೆಂಗುಡೇಲು, ಜನಾರ್ದನ ಪೂಜಾರಿ ಬಾಕಿಲಗುತ್ತು, ಸಂಕಪ್ಪ ಪೂಜಾರಿ ಮಾಡಾವು, ಮೋನಪ್ಪ ಪೂಜಾರಿ, ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.
ರೇಣುಕಾ ಕಣಿಯೂರು ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

More articles

Latest article