Wednesday, April 10, 2024

ಮನಸ್ಸು-3

ಮುಂದುವರಿದುದು…….
ಚತುರ (SMART)ನಾಗಿರದ ಮೊಬೈಲಿಗೆ ಮಾರು ಹೋಗದೆ ಮಾರು ದೂರವೇ ಇರುವ ಪ್ರಯತ್ನ ಒಳಿತಲ್ಲವೇ? ಈ ನಿಟ್ಟಿನಲ್ಲಿ ನಮ್ನ ಮನಸ್ಸನ್ನು ಗಟ್ಟಿಗೊಳಿಸಲೇಬೇಕು. ಮೊಬೈಲು ಮಹಾ ಕೊಲೆಗಾರ. ಅದು ನಮ್ಮ ಸಮಯವನ್ನು ಕೊಲ್ಲುತ್ತದೆ, ಸಂಬಂಧಗಳನ್ನು ಕೊಲ್ಲುತ್ತದೆ, ಆರೋಗ್ಯವನ್ನು ಕೊಲ್ಲುತ್ತದೆ, ಮೌಲ್ಯವನ್ನು ಕೊಲ್ಲುತ್ತದೆ, ನಮ್ಮತನವನ್ನು ಕೊಲ್ಲುತ್ತದೆ, ಗಳಿಕೆಯನ್ನು ಕೊಲ್ಲುತ್ತದೆ, ದುಡಿಮೆಯನ್ನು ಕೊಲ್ಲುತ್ತದೆ ಮೇಲಾಗಿ ನಮ್ಮ ದೃಷ್ಟಿ ಮತ್ತು ದೃಷ್ಟಿಕೋನಗಳೆರಡನ್ನೂ ಕೊಲ್ಲುತ್ತದೆ.
ದೃಶ್ಯ ಮಾಧ್ಯಮಗಳಲ್ಲಿ ಒಂದಾದ ದೂರದರ್ಶನವು ನಮ್ಮ ಮನಸ್ಸನ್ನು ಬಾಗಿಸುವ ಇನ್ನೊಂದು ವಿದ್ಯುನ್ಮಾನ ಉಪಕರಣ. ಮನೆಗೆ ಯಾರೇ ಬಂದರೂ ’ಕ್ಯಾರೇ’ ಮಾಡದೆ ಆ ಕಡೆಗೆ ಕತ್ತನ್ನು ಕೂಡಾ ಹೊರಳಿಸದೆ ದೂರದರ್ಶನ ವೀಕ್ಷಣೆಯಲ್ಲಿಯೇ ಮಗ್ನರಾಗುವವರು ನಾವು. ಕೆಲವರು ತಮ್ಮ ಕಣ್ಣುಗಳು ಒಮ್ಮೆ ಮೊಬೈಲ್, ಇನ್ನೊಮ್ಮೆ ಟಿ.ವಿ. ಎರಡೆರಡನ್ನೂ ಏಕಕಾಲಕ್ಕೆ ನೋಡಲನುಕೂಲವಾಗವಂತೆ ಕ್ರಮ ಯೋಜನೆಗೊಳಪಡಿಸಿರುವದೂ ಇದೆ. ಕೈಯಲ್ಲಿ ಮೊಬೈಲ್‌ನೊಂದಿಗೆ ಚಿನ್ನಾಟವಾಡುತ್ತಾ ಟಿ.ವಿ ನೋಡುವುದು ಕೆಲವರಿಗೆ ಬಹಳ ಸಲೀಸಾದ ಮೋಜಾಗಿದೆ.
ನಮ್ಮ ಮನಸ್ಸು ಟಿ.ವಿ.ಯ ಕಡೆಗೆ ವಾಲುತ್ತಿರುವುದರಿಂದ ಮನೆ ಮನೆಗಳಲ್ಲಿ ಜಗಳಗಳಾಗುತ್ತಿವೆ. ಅಡುಗೆ ಕರಟಿಹೋಗಿದೆ, ಸರಿಯಾಗಿ ಬೆಂದಿಲ್ಲ, ತಣಿದುದುದೇ ಬಡಿಸಿದ್ದು ಏಕೆ? ಬೇರೆ ತಿಂಡಿ ಮಾಡಬಹುದಿತ್ತಲ್ಲ? ನಾನು ಊಟಕ್ಕಾಗಿ ಕಾಯಬೇಕಾ? ಈ ರೀತಿಯ ಕ್ಷುಲ್ಲಕ ವಿಷಯಗಳನ್ನಾಧರಿಸಿ ಆಗುತ್ತಿರುವ ಜಗಳಗಳಿಗೆ ಮನಸ್ಸುಗಳು ಟಿ.ವಿ ಕಾರ್ಯಕ್ರಮಗಳಿಗೆ ಬಗ್ಗಿಕೊಂಡಿರುವುದೇ ಆಗಿದೆ. ದೋಸೆ ಹೊಯ್ದು ಅದು ಬೇಯುವ ತನಕ ಟಿ.ವಿ ನೋಡಿಬಿಡುತ್ತೇನೆ ಎಂದು ಹೊರ ಬಂದರೆ, ಕಾರ್ಯಕ್ರಮದೆಡೆಯಲ್ಲಿ ದೋಸೆ ಬೆಂದು ಸೀದರೆ? ಒಗ್ಗರಣೆ ಕರಟಿ ಹೋದರೆ? ಸುಲಭ ತಿಂಡಿಯಾಗಿ ಯಾವಾಗಲೂ ಅವಲಕ್ಕಿ, ಬ್ರೆಡ್ಡು, ರಸ್ಕ್, ಬಿಸ್ಕಿಟ್‌ಗಳೇ ಆದರೆ? ಜಗಳಗಳಾಗದಿರುತ್ತವೆಯೇ? ಆಹಾರವನ್ನು ಆನಂದ ಪುಳಕಿತರಾಗಿ ನೆಮ್ಮದಿಯಿಂದ ಸೇವಿಸಿದರೆ ಆರೋಗ್ಯ. ಆದರೆ ಟಿ.ವಿ ವೀಕ್ಷಣೆಯಿಂದ ಆನಂದ ನೆಮ್ಮದಿಗಳು ನಶಿಸಿದರೆ? ಮನಸ್ಸನ್ನು ಟಿ.ವಿ.ಯ ಸೆಳೆತದಿಂದ ಮುಕ್ತಗೊಳಿಸುವುದೇ ಸೂಕ್ತ ಪರಿಹಾರವಾಗದೇ?
ಪಾಕ ತಯಾರಕರು ಮಾತ್ರ ಮನಸ್ಸನ್ನು ದೂರದರ್ಶನದ ಹಿಡಿತದಿಂದ ಸಡಿಲಗೊಳಿಸಿದರಷ್ಟೇ ಸಾಲದು. ಆಹಾರ ಸೇವನೆ ಮತ್ತು ಟಿ.ವಿ ವೀಕ್ಷಣೆಗಳೂ ಏಕಕಾಲಕ್ಕೆ ನಡೆಯುತ್ತಿರಬಾರದು. ತಿನ್ನುವ ಆಹಾರ ಬಾಯಿಯೊಳಗೆ ಮೆಲ್ಲಲ್ಪಟ್ಟು ಜೊಲ್ಲು ರಸದೊಂದಿಗೆ ಮಿಳಿತಗೊಂಡು ನುಂಗಲ್ಪಟ್ಟರೆ ಜೀರ್ಣಕ್ರಿಯೆ ಸಲೀಸು. ಆಹಾರವನ್ನು ಬಡಿಸುತ್ತಿದ್ದಂತೆ ಮತ್ತು ತಿನ್ನುತ್ತಿರುವಂತೆ ಕಣ್ಣು ಮತ್ತು ಮನಸ್ಸು ಬಟ್ಟಲಿನೆಡೆಗಿರದೆ ಟಿ.ವಿ.ಯತ್ತವೇ ಇದ್ದರೆ ಎಲ್ಲಿ ಮೆಲ್ಲು, ಎಲ್ಲಿ ಜೊಲ್ಲು ಅಲ್ಲವೇ? ಬಿಲವನ್ನು ತುಂಬಿದಂತೆ ಬಾಯೊಳಕ್ಕೆ ತಳ್ಳಲ್ಪಡುವ ಆಹಾರ ನಮ್ಮ ದೇಹದ ಅನಾರೋಗ್ಯಕ್ಕೆ ಹೇತುವಾದಿತೇ ಹೊರತು ಶಕ್ತಿದಾಯಕವಾಗದು.
ಮೊಬೈಲು ಹೇಗೆ ಮಹಾಕೊಲೆಗಾರನೋ ಅದೇ ರೀತಿಯಲ್ಲಿ ಟಿ.ವಿ.ಯೂ ಮಹಾಕೊಲೆಪಾತಕಿಯೇ ಸರಿ. ಬದುಕನ್ನು ಡೋಲಾಯಮಾನಗೊಳಿಸುವ ಆಥವಾ ವಿನಾಶಗೊಳಿಸುವ ಎಲ್ಲ ಶಕ್ತಿಯೂ ದೂರದರ್ಶನಕ್ಕಿದೆ. ಆದುದರಿಂದ ರುಚಿಕರವಾದರೂ ವಿಷಸ್ವರೂಪವಾದ ದೂರದರ್ಶನದಿಂದ ನಮ್ಮ ಮನಸ್ಸನ್ನು ನಿಯಂತ್ರಿಸುವುದು ಅತೀ ಅಗತ್ಯ.
…ಮುಂದುವರಿಯುತ್ತದೆ.
ಲೇ: ರಮೇಶ ಎಂ ಬಾಯಾರು, ಎಂ. ಎ, ಬಿ.ಎಡ್


ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಂದನ ಕೇಪು
ಮತ್ತು ಆಡಳಿತಾಧಿಕಾರಿ ಜನತಾ ಎಜುಕೇಷನಲ್ ಸೊಸೈಟಿ (ರಿ) ಅಡ್ಯನಡ್ಕ

More from the blog

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಬಂಟ್ವಾಳದ ಕುದ್ಕೋಳಿ: ಹೊತ್ತಿ ಉರಿದ ಡಸ್ಟರ್ ಕಾರು

ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಇಂದು ಬೆಳಗ್ಗೆ (ಸೋಮವಾರ) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...