


ಮುಂದುವರಿದುದು…….
ಮೊಬೈಲುಗಳಂತೆ ದೂರದರ್ಶನವು ಕೂಡಾ ಅದ್ವಿತೀಯ ಕೊಲೆಗಾರ. ಅನಿಯಂತ್ರಿತವಾಗಿ ಬಳಸಿದರೆ ಟಿ.ವಿ.ಯು ನಮ್ಮ ಸಮಯ, ಸಂಬಂಧ, ಪ್ರಗತಿಗಳೆಲ್ಲದರ ಕೊಲೆಗಾರ. ಯಾವುದಾದರೂ ಧಾರಾವಾಹಿಗಳಿಗೆ ವಶವರ್ತಿಯಾದರೆ ನಮ್ಮ ಕಥೆ ಅಯೋಮಯವೇ ಸರಿ. ಧಾರಾವಾಹಿಗಳು ಚಿಕಿತ್ಸಕ ಬೌದ್ಧಿಕತೆಯನ್ನು ಬೆಳೆಸುವಲ್ಲಿ ಸಹಕಾರಿಯಲ್ಲ. ಉದಾತ್ತ ಹೃದಯವಂತಿಕೆಯನ್ನು ಮೂಡಿಸಲು ನೇರವಾಗುತ್ತಿಲ್ಲ, ಕಥಾ ನಿರೂಪಕನು ಕೊಂಚ ಮಟ್ಟಿಗಾದರೂ ಗುಣವರ್ಧಕ ಟಾನಿಕ್‌ನ್ನು ತಕ್ಷಣದ ನೋಡುಗನಿಗೆ ನೀಡುವ ಗುರಿಹೊಂದಿದಂತಿಲ್ಲ. ಯಾವುದಾದರೊಂದು ಸಂದರ್ಭವನ್ನು ಬಹಳ ಉದ್ದವಾಗಿ ಎಳೆಯುವ ಮತ್ತು ಒಂದು ಆಸಕ್ತಿದಾಯಕ ಹಂತದಲ್ಲಿ ಪ್ರತೀ ಅಧ್ಯಾಯಕ್ಕೂ ನಿಲುಗಡೆ ತೋರಿಸುವ ಜಾಣ್ಮೆಗಳನ್ನೇ ನಾವು ಕಾಣಬಹುದಾಗಿದ್ದು ವರ್ಷಾನುಗಟ್ಟಲೆ ಕಥಾ ಸೆಳೆತದೊಂದಿಗೆ ಮಾರುಕಟ್ಟೆ ಹೊಂದುವ ತಂತ್ರಗಾರಿಕೆಯೇ ಹೆಚ್ಚಾಗಿದೆ.
ವಿದ್ಯಾರ್ಥಿಗಳ ಕಲಿಕಾ ಬೆಳವಣಿಗೆಗೆ ದೂರದರ್ಶನದ ಧಾರಾವಾಹಿಗಳು, ರಿಯಾಲಿಟೀ ಶೋಗಳು ಪ್ರಧಾನ ಅಡಚಣೆಯಾಗಿವೆ. ಮನೆಯವರ ಮನಸ್ಸಿನ ಸೆಳೆತ ಟಿ.ವಿ.ಯತ್ತಲೇ ಇರುವಾಗ ವಿದ್ಯಾರ್ಥಿಗಳು ತಮ್ಮಕಲಿಕೆಯಲ್ಲಿ ಮುಳುಗಿರಲು ಹೇಗೆ ಸಾಧ್ಯ, ಅಲ್ಲವೇ? ಹೆತ್ತವರ ತ್ಯಾಗದಿಂದಾಗಿ ಟಿ.ವಿ.ಯಿಂದ ದೂರವಿರಲು ಸಾಧ್ಯವೇ? ಏಕೆ ಸಾಧ್ಯವಿಲ್ಲ? ಹೆತ್ತವರು ಟಿ.ವಿ ಮರ್ಜಿಗೆ ಬಲಿಯಾಗದಿರುವುದು, ಮನೋಸ್ಥಿತಿಯಲ್ಲಿ ಬದಲಾವಾಣೆಯಾಗುವುದರಿಂದ ದೂರದರ್ಶನದ ಪಿಡುಗನ್ನು ಕಡಿಮೆ ಮಾಡಲು ಸಾಧ್ಯ.
…ಮುಂದುವರಿಯುತ್ತದೆ.
ಲೇ: ರಮೇಶ ಎಂ ಬಾಯಾರು, ಎಂ. ಎ, ಬಿ.ಎಡ್


