


ಬಂಟ್ವಾಳ: ದ್ವಿಚಕ್ರ ವಾಹನ ಕಳವು ಪ್ರಕರಣ ಕ್ಕೆ ಸಂಬಂಧಿಸಿದಂತೆ ಒರ್ವನ ಬಂಧಿಸಿ, ವಾಹನ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಂಟ್ವಾಳ ನಗರ ಠಾಣಾ ಪೋಲೀಸರು.
ತಮಿಳುನಾಡಿನ ಪುದುಕೋಟೆ ಜಿಲ್ಲೆಯ
ಅರಂತಾಂಗಿ ತಾಲೂಕಿನ
ಒಡಕವಾಡಿ ನಿವಾಸಿ
ರಾಜಾ ಕೆ.(38) ಬಂಧಿತ ಆರೋಪಿ.
ಫೆ.13 ರಂದು ಮೆಲ್ಕಾರ್ ನ ಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಆಕ್ಟೀವ್ ಹೊಂಡಾ ಕಳವು ನಡೆದ ಬಗ್ಗೆ ಫೆ.15 ರಂದು ಬಂಟ್ವಾಳ ನಗರ ಠಾಣೆ ಯಲ್ಲಿ ದೂರು ದಾಖಲಾಗಿತ್ತು.
ಕಲ್ಲಡ್ಕ ನಿವಾಸಿ ಸಂದೇಶ ಎಂಬವರು ಅವರ ಮೆಲ್ಕಾರ್ ನಲ್ಲಿರುವ ಎಸ್.ಆರ್. ಮೊಬೈಲ್ ಅಂಗಡಿಯ ಕೆಳಗಡೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ನಡೆದಿತ್ತು.
ಈ ದೂರಿನ ಅಧಾರದ ಲ್ಲಿ ಬಂಟ್ವಾಳ ನಗರ ಪೋಲೀಸರು ಪ್ರಕರಣದ ಜಾಲವನ್ನು ಕಂಡು ಹಿಡಿದು ಆರೋಪಿ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ರಾಜಾ ಸಹಿತ ವಾಹನವನ್ನು ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಇಂದು ಬೆಳಿಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ವಾಹನಕಳವು ಮಾಡಿದ ಬಳಿಕ ವಾಹನವನ್ನು ಮಂಗಳೂರು ಕಡೆಗೆ ಮಾರಾಟ ಮಾಡಲು ತೆರಳಿದ್ದ, ಆದರೆ ಮಂಗಳೂರು ಮಾರಾಟ ವಾಗದ ಕಾರಣ ವಾಪಾಸು ವಾಹನದ ಮೂಲಕ ಮೈಸೂರು ಕಡೆಗೆ ಮಾರಾಟ ತೆರಳುತ್ತಿದ್ದ ವೇಳೆ ದಾಸಕೋಡಿಯಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದಿದಾನೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ದಾಸಕೋಡಿಯಲ್ಲಿ ಸಿಬ್ಬಂದಿ ಯವರ ಜೊತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಈತ ವಾಹನ ನಿಲ್ಲಿಸಿದೆ ಪರಾರಿಯಾಗಲು ಯತ್ನಿಸಿದಾಗ ಸಂಶಯಗೊಂಡ ಪೋಲೀಸರು ಈತನ ಬೆನ್ನಟ್ಟಿ ಹೋಗಿ ವಾಹನ ಅಡ್ಡ ಹಾಕಿ ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಡಿ.ವೈ.ಎಸ್.ಪಿ. ವೆಲಂಟೈನ್ ಡಿಸೋಜ ಅವರ ಮಾರ್ಗದರ್ಶನ ದಲ್ಲಿ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಅವಿನಾಶ್ ಮತ್ತು ಅವರ ಸಿಬ್ಬಂದಿ ಗಳಾದ ಎ.ಎಸ್.ಐ.ಸಂಜೀವ ಕೆ. ಪ್ರೋ.ಪಿ.ಎಸ್.ಐ.ಕುಮಾರ್, ಎಚ್.ಸಿ.ಸುರೇಶ್ ಪಡಾರ್, ಪಿ.ಸಿ.ಶ್ರೀಕಾಂತ್ ಕಾರ್ಯಾಚರಣೆ ನಡೆಸಿದ್ದರು.


