ಬಂಟ್ವಾಳ: ಮರಳು ಸಾಗಾಟ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ಹ ಹಳೆಯ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಡ್ಯಾರು ಪದವು ನಿವಾಸಿ ಹಸನಬ್ಬ ಅವರ ಪುತ್ರ ಹಕೀಂ(28) ಬಂಧಿತ ಆರೋಪಿ. ಅಕ್ರಮ ಪರವಾನಿಗೆಯ ಮೂಲಕ ಮರಳು ಸಾಗಾಟದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ಗುರುಪುರ ಕೈಕಂಬ ಎಂಬಲ್ಲಿ 2017ರಲ್ಲಿ ನಕಲಿ ಪರವಾನಿಗೆಯ ಮೂಲಕ ಅಕ್ರಮ ಮರಳು ಸಾಗಾಟ ಆರೋಪದಲ್ಲಿ ಈತನ ವಿರುದ್ಧ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿ ಪೋಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ.

ತಲೆಮರೆಸಿಕೊಂಡ ಆರೋಪಿಯನ್ನು ಮಂಗಳೂರು ಪಂಪ್ ವೆಲ್ ಬಳಿ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ಧು, ನ್ಯಾಯಾಲಯ ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಟ್ವಾಳ ಡಿ.ವೈ.ಎಸ್.ಪಿ.ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಗೌಡ ಅವರ ತಂಡ ಎ.ಎಸ್.ಐ.ಸಂಜೀವ, ಎಚ್.ಸಿ.ಸುರೇಶ್ ಪಡಾರ್, ಪಿ.ಸಿಗಳಾದ ಶ್ರೀಕಾಂತ್, ಪ್ರವೀಣ್ ಅವರು ಕಾರ್ಯಚರಣೆ ನಡೆಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here