ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ಇದರ ಆಡಳಿತ ಮಂಡಳಿಗೆ ಸಾಮಾನ್ಯ ಕ್ಷೇತ್ರದಿಂದ ಎಲ್.ಎನ್.ಕೂಡೂರು, ಮೋಹನ್.ಕೆ.ಎಸ್, ಹರೀಶ್ ನಾಯಕ್.ಎಂ, ಕೃಷ್ಣ.ಕೆ, ಮನೋರಂಜನ್.ಕೆ.ಆರ್, ಗೋವರ್ಧನ ಕುಮಾರ್.ಐ, ವಿಶ್ವನಾಥ.ಎಂ, ಬಾಲಕೃಷ್ಣ.ಪಿ.ಎಸ್, ದಯಾನಂದ ಆಳ್ವ.ಕೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ಜಯಂತಿ.ಹೆಚ್ ರಾವ್ ಹಾಗೂ ಶುಭಲಕ್ಷ್ಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ಪ್ರವರ್ಗ ’ಎ’ ಮೀಸಲು ಕ್ಷೇತ್ರದಿಂದ ಉದಯ ಕುಮಾರ್.ಎ ಹಾಗೂ ಜಗನ್ನಾಥ ಸಾಲಿಯಾನ್.ಹೆಚ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸುಂದರ.ಡಿ ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ದಿವಾಕರ.ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಅವಿರೋಧ ಆಯ್ಕೆ ಆಗಿರುವುದರಿಂದ ಮಾ. 2ರಂದು ನಡೆಯಬೇಕಾಗಿದ್ದ ಚುನಾವಣೆಯು ಇರುವುದಿಲ್ಲ ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ರಿಟರ್ನಿಂಗ್ ಅಧಿಕಾರಿ ರಿಟರ್ನಿಂಗ್ ಅಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.