ಅಡ್ಯನಡ್ಕ: ಅಡ್ಯನಡ್ಕದ ವಾರಣಾಶಿ ತೋಟದಲ್ಲಿ ಇದೇ ಫೆಬ್ರವರಿ 29 ಮತ್ತು ಮಾರ್ಚ್ 1ರಂದು ವಾರಣಾಶಿ ಸಾವಯವ ಫಾರ್ಮ್ಸ್ ಮತ್ತು ಬೆಂಗಳೂರಿನ ಅಜ್ಜಿಮನೆ ಈವೆಂಟ್ ಸೊಲ್ಯೂಶನ್ಸ್ ಸಹಯೋಗದೊಂದಿಗೆ ದೈಹಿಕ -ಮಾನಸಿಕ ತಂದುರುಸ್ತಿಯ ’ಜಟಕಾ’ ಉತ್ಸವವನ್ನು ನಡೆಸಲಿದೆ.
ಈ ಉತ್ಸವದಲ್ಲಿ ಕಲೆ, ಯೋಗ, ವ್ಯಾಯಾಮ, ಸಿ.ಪಿ.ಆರ್, ಈಜು, ಸ್ಲ್ಯಾಕ್‌ಲೈನ್, ಹೈಲೈನ್, ಉರಗ ವೀಕ್ಷಣೆ, ಪಕ್ಷಿವೀಕ್ಷಣೆ, ಸ್ಕೇಟ್ ಬೋರ್ಡಿಂಗ್, ಕರ್ನಾಟಕ ಮತ್ತು ಪಾಶ್ಚಾತ್ಯ ಸಂಗೀತ ಮುಂತಾದ ವಿಷಯಗಳ ಬಗ್ಗೆ ಆಯಾ ವಿಭಾಗದಲ್ಲಿ ಪರಿಣತಿ ಹೊಂದಿದ ಹೆಸರಾಂತ ವ್ಯಕ್ತಿಗಳು ಹಾಗೂ ಕಲಾವಿದರಿಂದ ಶಿಬಿರಗಳು ಮತ್ತು ಪ್ರದರ್ಶನಗಳು ನಡೆಯಲಿವೆ. ಇದು ಶಿಬಿರಾರ್ಥಿಗಳಿಗೆ ದೈಹಿಕ ಚಲನಾ ಸಾಮರ್ಥ್ಯದೊಂದಿಗೆ ಮಾನಸಿಕ ಹತೋಟಿಯನ್ನು ಅರಿಯುವ ಹೊಸ ಮಾರ್ಗಗಳನ್ನು ಅನ್ವೇಷಿಸಲು ಸಹಕರಿಸಲಿದೆ ಎಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಳಿಗೆ ವಾರಾಣಾಶಿ ಸಂಸ್ಥೆಯ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದು.
<https://forms.gle/uETJYq5yYBeyh72w8>
Instagram ಪುಟ @varanashiorganicfarms