ಬಂಟ್ವಾಳ: ಬಂಟ್ವಾಳ ತಾ.ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಬಸ್ತಿಕೋಡಿ ತ್ರಿವೇಣಿ ಕಲಾವೃಂದ, ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಬಸ್ತಿಕೋಡಿ ಶ್ರೀ ದುರ್ಗಾ ಸೈಬರ್ ಸೆಂಟರ್ ಸಿಎಸ್‌ಸಿ ಸೇವಾ ಕೇಂದ್ರ ಇದರ ವತಿಯಿಂದ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಆಶ್ರಯದಲ್ಲಿ ಆಧಾರ್ ಮೇಳ, ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ನೋಂದಣಿ ಕಾರ್ಯಕ್ರಮ ಬಸ್ತಿಕೋಡಿಯಲ್ಲಿ ಫೆ.28 ರಂದು ಜರಗಿತು.
ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆಧಾರ್ ಮೇಳಗಳು ಗ್ರಾಮೀಣ ಜನತೆಗೆ ಸುವರ್ಣಾವಕಾಶವಾಗಿದ್ದು, ಸಹಕಾರಿಯಾಗಿದೆ. ಪುತ್ತೂರು ಅಂಚೆ ಇಲಾಖೆ ಒದಗಿಸಿದ ಇಂತಹ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಅಂಚೆ ಇಲಾಖೆ ಪ್ರಧಾನ ಶಾಖೆ ಪುತ್ತೂರು ಇದರ ಅಽಕ್ಷಕ ಜಾರ್ಜ್ ರೊಡ್ರಿಗಸ್, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ, ಪದವು ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಗ್ರಾ.ಪಂ.ಸದಸ್ಯರಾದ ಆನಂದ ಆಚಾರ್ಯ, ದಯಾನಂದ ಕುಲಾಲ್, ಸಿಎಸ್‌ಸಿ ಕೇಂದ್ರದ ಪ್ರಕಾಶ್ ಗಟ್ಟಿ, ಉದ್ಯಮಿಗಳಾದ ಲಾದ್ರು ರೊಡ್ರಿಗಸ್, ರಫೀಕ್, ಅಂಚೆ ಇಲಾಖೆ ಸಿಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ಆನಂದ ಆಚಾರ್ಯ ಸ್ವಾಗತಿಸಿದರು. ತ್ರಿವೇಣಿ ಕಲಾವೃಂದ ಸಂಚಾಲಕ ಪ್ರವೀಣ್ ಗಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.